ಭಾರತೀಯ ಮುಸ್ಲಿಮರು ನರಮೇಧ ಭೀತಿಯನ್ನು ಎದುರಿಸುತ್ತಿದ್ದಾರೆ: ಕ್ಯಾಲಿಫೋರ್ನಿಯಾ ಪ್ರಾಧಿಕಾರ ಕಳವಳ

Prasthutha|

ವಾಷಿಂಗ್ಟನ್: ಉದಾರ ಪ್ರಜಾಪ್ರಭುತ್ವದ ಭಾರತವು ಮಹತ್ವದ ರಾಜಕೀಯ ಬಿಕ್ಕಟ್ಟಿನಲ್ಲಿ ಮುಳುಗಿದ್ದು, ಫ್ಯಾಶಿಸ್ಟ್ ವರ್ಗವು ಮುಸ್ಲಿಮರ ನರಮೇಧ ಮತ್ತು ನಿರ್ನಾಮಕ್ಕೆ ಕರೆ ನೀಡುತ್ತಾ ಬರುತ್ತಿದೆ. 1950 ರಿಂದ ಇದು ಅತ್ಯಂತ ಭಯಾನಕ ರೂಪವನ್ನು ತಾಳಿದೆ ಮತ್ತು ಭಾರತೀಯ ಮುಸ್ಲಿಮರು ಸನ್ನಿಹಿತ ನರಮೇಧ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಡಾ. ಅಂಗನಾ ಚಟರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಮಾರ್ಚ್ 12 ರಂದು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೀಗೆ ಎಚ್ಚರಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸನ್ನಿಹಿತ ಮುಸ್ಲಿಮರ ನರಮೇಧ ಮತ್ತು ಜಾಗತಿಕ ಇಸ್ಲಮೋಫೋಬಿಯಾ ಕುರಿತು ಬೆಳಕು ಚೆಲ್ಲಿದ್ದಾರೆ.

- Advertisement -

ಭಾರತದ ಆಡಳಿತಾರೂಢ ಬಿಜೆಪಿ ಪಕ್ಷವು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು ಎದುರಿಸುತ್ತಿರುವ ಬೆದರಿಕೆಯ ಕುರಿತು ಸಂವಾದದಲ್ಲಿ ಮಾತನಾಡುತ್ತಿದ್ದ ವೇಳೆ ಸುಮಾರು 200 ಮಂದಿ ಸೇರಿದ್ದರು. ಆರೆಸ್ಸೆಸ್ ಸಂಘಟನೆ ಅರೆ ಸೇನಾಪಡೆಯು ಅಮೆರಿಕದಲ್ಲಿ ಪ್ರಮುಖರ ಬೆಂಬಲವನ್ನು ಪಡೆದಿದೆ ಎಂದು ಕೂಡ ವಿಷಾದಿಸಿದ್ದಾರೆ.

ಸದ್ಯ ಭಾರತ ಎತ್ತ ಸಾಗುತ್ತಿದೆ ಎಂಬುವುದರ ಕುರಿತು ತೀವ್ರ ಆತಂಕವಿದ್ದು, ಮುಸ್ಲಿಮ್ ಬಾಲಕಿಯರು ಮತ್ತು ಮಹಿಳೆಯರ ವಸ್ತ್ರವನ್ನು ನಡು ರಸ್ತೆಯಲ್ಲೇ ಬಿಚ್ಚಿಡುವಂತೆ ಬಲವಂತಪಡಿಸಲಾಗುತ್ತಿದೆ. ಆನ್‌ಲೈನ್ ಫ್ಲಾಟ್ ಫಾರ್ಮ್ ಮತ್ತು ಅಪ್ಲಿಕೇಶನ್ ಮೂಲಕ ಮಹಿಳೆಯ ಮಾನ ಹರಾಜು ಹಾಕಲಾಗುತ್ತಿದೆ ಎಂದು ಹೂಸ್ಟನ್ ವಿಶ್ವವಿದ್ಯಾಲಯದ ಡಾ. ಸಮೀನಾ ಸಲೀಮ್ ಇದೇ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೇರಿ ಮೋದಿ ಪ್ರಧಾನಿಯಾದ ಬಳಿಕ ಹಿಂದುತ್ವ ಕಾರ್ಯಕರ್ತರಿಂದ ಮುಸ್ಲಿಮರನ್ನು ಗುರಿಯಾಗಿಸಿ ನಿರಂತರ ಹಿಂಸಾಚಾರ, ಅವಮಾನ ಮತ್ತು ಹತ್ಯೆಗಳಲ್ಲಿ ತೊಡಗಿಸಿಕೊಳ್ಳುವುದು ಒಂದು ಅಭ್ಯಾಸವಾಗಿ ಮುಂದುವರಿದಿದೆ ಎಂದು ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದ ಡಾ. ರೋಹಿತ್ ಚೋಪ್ರಾ ಹೇಳಿದರು.

ಸಂಸ್ಕೃತಿ ಮತ್ತು ವಸ್ತ್ರಧಾರಣೆಯ ಹೆಸರಿನಲ್ಲಿ ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸಿ ನಿರಂತರ ಲಿಂಗ ತಾರತಮ್ಯ, ಹಲ್ಲೆ ಮತ್ತು ಕೊಲೆಯಂತಹ ಪ್ರಕರಣಗಳು ಗಂಭೀರಾವಸ್ಥೆಯಲ್ಲಿದೆ ಎಂದು ವೇಯ್ನ್ ಸ್ಟೇಟ್ ವಿಶ್ವವಿದ್ಯಾಲಯದ ಡಾ. ಖಲೀದ್ ಬೇಡೌನ್ ಹೇಳಿದರು.

ಇದೇ ಸಂದರ್ಭದಲ್ಲಿ ಮತ್ತೆ ಮಾತನಾಡಿದ ಡಾ. ಸಮೀನಾ ಸಲೀಮ್, ತಾಲಿಬಾನ್ ಬಂಡುಕೋರರಿಂದಾಗಿ ಅಫ್ಘಾನ್ ಮಹಿಳೆಯರು ಮತ್ತು ಬಾಲಕಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕೋಲಾಹಲವೆಬ್ಬಿಸಿದ ಪಾಶ್ಚಿಮಾತ್ಯ ಲೋಕವು, ಇದೀಗ ಭಾರತದಲ್ಲಿ ಮುಸ್ಲಿಮ್ ಮಹಿಳೆಯರ ವಿರುದ್ಧ ನಡೆಯುತ್ತಿರುವ ಮಹಿಳಾ ವಿರೋಧಿ ದ್ವಿಮುಖ ದೋರಣೆಗೆ ಸ್ತ್ರೀವಾದಿಗಳು ಯಾಕೆ ಮೌನ ವಹಿಸುತ್ತಿದ್ದಾರೆ ಎಂದು ಕಿಡಿಗಾರಿದರು.




Join Whatsapp