►ಖ್ಯಾತ ISL ಫುಟ್ಬಾಲ್ ಆಟಗಾರ ಮಿರ್ಷಾದ್ ಮಿಚು ಅವರಿಂದ ಲೋಕಾರ್ಪಣೆ
ಮಂಗಳೂರು: ಸಿಟಿ ಗೋಲ್ಡ್ & ಡೈಮಂಡ್ಸ್ ಗ್ರೂಪಿನ ವಿನೂತನ ಶೈಲಿಯ ಮಳಿಗೆ ‘ಕಿವಾಬಾಕ್ಸ್’ ನಗರದ ಫೋರಂ ಫಿಝಾ ಮಾಲ್ ನಲ್ಲಿ ಗ್ರಾಹಕರಿಗಾಗಿ ತೆರೆದುಕೊಂಡಿದೆ. ಅತ್ಯಾಕರ್ಷಕ ಹಾಗೂ ಅತ್ಯಂತ ರಿಯಾಯಿತಿ ಮತ್ತು ಕಡಿಮೆ ದರದಲ್ಲಿ ಆಭರಣಗಳನ್ನು ಖರೀದಿಸಲು ಅತ್ಯುತ್ತಮ ಸೂಕ್ತ ಮಳಿಗೆಯಾಗಿದೆ.
‘ಕೆವಾಬಾಕ್ಸ್’ ಮಳಿಗೆಯ ನೂತನ ಲೋಗೋವನ್ನು ಖ್ಯಾತ ಫುಟ್ಬಾಲ್ ಆಟಗಾರ, ನಾರ್ಥ್ ಈಸ್ಟ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೋಲ್ ಕೀಪರ್ ಮಿರ್ಷಾದ್ ಮಿಚು ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿದರು.
‘ಕೆವಾಬಾಕ್ಸ್’ ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವನ್ನು ಹೊಂದಿದ್ದು, ಪಾಂಡೇಶ್ವರದ ಫೋರಂ ಫಿಝಾ ಮಾಲ್ ನಲ್ಲಿ ಈಗಾಗಲೇ ಗ್ರಾಹಕರ ಸೇವೆಗಾಗಿ ತೆರೆದುಕೊಂಡಿದೆ.
ಆಭರಣ ಮಳಿಗೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಿಟಿ ಗೋಲ್ಡ್ & ಡೈಮಂಡ್ಸ್ ನ ಪ್ರಥಮ ‘ಕೆವಾಬಾಕ್ಸ್’ ಮಳಿಗೆ ಮಂಗಳೂರಿನಲ್ಲಿ ಆರಂಭಗೊಂಡಿದೆ. ಸಿಟಿ ಗೋಲ್ಡ್ ಸಮೂಹದ ಮೂಲಕ ಒಂದು ವರ್ಷದ ಒಳಗೆ 10 ಪ್ರದರ್ಶನ ಮಳಿಗೆ ಹಾಗೂ ಮುಂದಿನ ಮೂರು ವರ್ಷಗಳಲ್ಲಿ 100 ಮಳಿಗೆಗಳನ್ನು ಕೇರಳ, ಕರ್ನಾಟಕ ಸೇರಿದಂತೆ ದೇಶ ,ವಿದೇಶಗಳಲ್ಲಿ ಆರಂಭಿಸುವ ಗುರಿಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಕರಿಂ ಅವರದ್ದಾಗಿದೆ.
ನೂತನ ಮಳಿಗೆಯ ಶುಭಾರಂಭದ ಆಫರ್ ಆಗಿ ಸೀಮಿತ ಅವಧಿಯವರೆಗೆ ಮಳಿಗೆಯಲ್ಲಿ ಆಭರಣ ಖರೀದಿಸುವ ಗ್ರಾಹಕರಿಗೆ ಶೇ 50 ಮೇಕಿಂಗ್ ಚಾರ್ಜ್ ನಲ್ಲಿ ರಿಯಾಯಿತಿ ದೊರೆಯಲಿದೆ. ಆಧುನಿಕ ವಿನ್ಯಾಸದ ಸೂಕ್ಷ್ಮ ಕುಸುರಿಯ ವಿಶೇಷ ಆಭರಣಗಳ ಸಂಗ್ರಹ ಹಾಗೂ ಗ್ರಾಹಕರಿಗೆ ಆನ್ಲೈನ್ ಮೂಲಕ ಡಿಜಿಟಲ್ ಮಾದರಿಯಲ್ಲಿ ಖರೀದಿಗೆ ಅವಕಾಶವನ್ನು ನೀಡಿದೆ. ಜೊತೆಗೆ ಮನೆ ಬಾಗಿಲಿಗೆ ಸುರಕ್ಷಿತವಾಗಿ ಆಭರಣ ತಲುಪಿಸುವ ಸೌಲಭ್ಯವಿದೆ ಎಂದು ಸಂಸ್ಥೆಯ ನಿರ್ದೇಶಕ ಮೊಹಮ್ಮದ್ ದಿಲ್ ಶಾದ್ ತಿಳಿಸಿದ್ದಾರೆ.
ವಿಶೇಷವಾಗಿ ಎಲ್ಲ ವಯೋಮಾನದವರಿಗೂ ಸರಿ ಹೊಂದುವ ಹಾಗೂ ಉಡುಗೊರೆಯಾಗಿ ನೀಡಬಹುದಾದ ಆಕರ್ಷಕ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಹೊಂದಿರುವುದು ಕೆವಾಬಾಕ್ಸ್ ಮಳಿಗೆಯ ವಿಶೇಷ.
ಲೋಗೋ ಅನಾವರಣ ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇರ್ಷಾದ್, ನಿರ್ದೇಶಕ ನೌಶಾದ್ ಸಿಎ ಹಾಗೂ ಬ್ರ್ಯಾಂಡ್ ಕನ್ಸಲ್ಟೆಂಟ್ ಸಂತೋಷ್ ಉಪಸ್ಥಿತರಿದ್ದರು.