ಇಸ್ತಾಂಬುಲ್: ಮುಸ್ಲಿಮರ ವಿರುದ್ಧ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ರ ನೀತಿಗಳನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಉರ್ದುಗನ್ ತೀವ್ರವಾಗಿ ಟೀಕಿಸಿದ್ದಾರೆ. ಮ್ಯಾಕ್ರನ್ ತನ್ನ ಮಾನಸಿಕ ತಪಾಸಣೆಯನ್ನು ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
“ವಿವಿಧ ನಂಬಿಕೆಗಳು ಗುಂಪುಗಳನ್ನು ಅನುಸರಿಸುವ ಮಿಲಿಯಾಂತರ ಸದಸ್ಯರನ್ನು ರಾಜ್ಯದ ಮುಖ್ಯಸ್ಥ ಈ ರೀತಿಯಲ್ಲಿ ಉಪಚರಿಸುದಾದರೆ ಏನೆಂದು ಹೇಳಬಹುದು: ಅವರು ಮೊದಲು ಮಾನಸಿಕ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಲಿ” ಎಂದು ಉರ್ದುಗಾನ್ ತನ್ನ ದೂರದರ್ಶನ ಭಾಷಣದಲ್ಲಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮ್ಯಾಕ್ರನ್ ಇಸ್ಲಾಮನ್ನು ಜಗತ್ತಿನಾದ್ಯಂತ ಬಿಕ್ಕಟ್ಟಿನಲ್ಲಿರುವ ಧರ್ಮ ಎಂದಿದ್ದರು. ಶಾಲೆಗಳ ಮೇಲೆ ಕಠಿಣ ನಿಗಾ ಮತ್ತು ಮಸೀದಿಗಳಿಗೆ ಬರುವ ವಿದೇಶಿ ನಿಧಿಯ ಮೇಲೆ ಹೆಚ್ಚು ನಿಯಂತ್ರಣವನ್ನು ಹೇರಲಾಗುವುದೆಂದು ಅವರು ಘೋಷಿಸಿದ್ದರು.