October 26, 2020

ಅಧ್ಯಕ್ಷರ ಇಸ್ಲಾಮೋಫೋಬಿಕ್ ಹೇಳಿಕೆ ಖಂಡಿಸಿ ಫ್ರಾನ್ಸ್ ತಂಡಕ್ಕೆ ರಾಜೀನಾಮೆ ನೀಡಿದ ಖ್ಯಾತ ಫುಟ್ಬಾಲ್ ತಾರೆ ಪೌಲ್ ಪೊಗ್ಬ

ಅಧ್ಯಕ್ಷ ಇಮ್ಯಾನುಯಲ್ ಮಾಕ್ರನ್ ರ ವಿವಾದಾಸ್ಪದ ಇಸ್ಲಾಮೋಫೋಬಿಕ್ ಹೇಳಿಕೆಯ ಬಳಿಕ ಫ್ರಾನ್ಸ್ ಅಂತಾರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಪೌಲ್ ಪೊಗ್ಬ ನಿವೃತ್ತಿಯನ್ನು ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

ಶುಕ್ರವಾರದಂದು ಮಾಕ್ರನ್ ನೀಡಿದ ಜನಾಂಗೀಯ ಹೇಳಿಕೆ ಮತ್ತು ಪ್ರವಾದಿಯವರನ್ನು ವ್ಯಂಗ್ಯ ಮಾಡಿದ ಶಿಕ್ಷಕನಿಗೆ ಸರಕಾರಿ ಗೌರವ ನೀಡಿರುವುದನ್ನು ಖಂಡಿಸಿ ಪೊಗ್ಬ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮಧ್ಯ ಪ್ರಾಚ್ಯ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾಕ್ರನ್ ಸರಕಾರದ ನಿರ್ಧಾರವು ತನಗೆ ಮತ್ತು ಫ್ರೆಂಚ್ ಮುಸ್ಲಿಮರಿಗೆ ಅವಮಾನವೆಂದು ಪೊಗ್ಬ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ.

 ‘ಇಸ್ಲಾಮಿಕ್ ಭಯೋತ್ಪಾದನೆಯ ದೈತ್ಯಾಕಾರಕ್ಕೆ ಏಕತೆ ಮತ್ತು ದೃಢತೆ ಉತ್ತರವಾಗಿದೆ ಎಂದು ಮ್ಯಾಕ್ರನ್ ಹೇಳಿದ್ದರು.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!