ಲಖಿಂಪುರ ಪ್ರಕರಣದ ಎಲ್ಲಾ ಸಾಕ್ಷಿದಾರರಿಗೂ ಸೂಕ್ತ ರಕ್ಷಣೆ ನೀಡಿ: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ತಾಕೀತು

Prasthutha|

ನವದೆಹಲಿ: ಲಖಿಂಪುರ ಖೇರಿ ಘಟನೆಗೆ ಸಂಬಂಧಪಟ್ಟಂತೆ ಎಲ್ಲ ಸಾಕ್ಷಿದಾರರಿಗೂ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟು ಉತ್ತರ ಪ್ರದೇಶ ಸರಕಾರಕ್ಕೆ ಬುಧವಾರ ತಾಕೀತು ಮಾಡಿದೆ.

- Advertisement -

ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಜಾಮೀನಿನ ಮೇಲೆ ಹೊರಗಿರುವ ಅವರ ಮಗ ಆಶಿಸ್ ಮಿಶ್ರಾ ಅವರು ಸಾಕ್ಷಿದಾರರಿಗೆ ಬೆದರಿಕೆ ಒಡ್ಡುತ್ತಿರುವುದಾಗಿ ಬರುತ್ತಿರುವ ದೂರು ರಾಜ್ಯ ಸರಕಾರದ ಕೈಲಾಗತನಕ್ಕೆ ಹೆಗ್ಗುರುತಾಗಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಆಶಿಸ್ ಮಿಶ್ರಾ ಒಬ್ಬ ಸಾಕ್ಷಿದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರ ಕುಟುಂಬದ ಒಬ್ಬರು ಮಿಶ್ರಾರ ಜಾಮೀನು ಕೂಡಲೆ ರದ್ದು ಪಡಿಸುವಂತೆ ಕೋರಿದ್ದಾರೆ. ಇದನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀ ಕೋರ್ಟು ಕೂಡಲೆ ಈ ವಿಷಯದಲ್ಲಿ ಉತ್ತರ ಪ್ರದೇಶ ಸರಕಾರವು ತನ್ನ ಕರ್ತವ್ಯ ನಿಬಾಯಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

- Advertisement -

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ ಅವರು ಈ ಬಗ್ಗೆ ಕೂಡಲೆ ಸಾಕ್ಷಿದಾರರಿಗೆ ಯಾವ ರೀತಿಯ ರಕ್ಷಣೆ ಒದಗಿಸಲಾಗಿದೆ ಎಂದು ಉತ್ತರಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತು.

ಜಸ್ಟಿಸ್ ಗಳಾದ ಸೂರ್ಯಕಾಂತ್ ಹಿಮ ಕೊಹ್ಲಿ ಅವರು  ಇದ್ದ ಸುಪ್ರೀಂ ಕೋರ್ಟು ಪೀಠವು ಸಾಕ್ಷಿಗಳಿಗೆ ಆಗುವ ಹಾನಿಯನ್ನು ಉತ್ತರ ಪ್ರದೇಶ ಸರಕಾರ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.  “ಸಾಕ್ಷಿದಾರನ ಮೇಲೆ ಜಾಮೀನಿನ ಮೇಲೆ ಹೊರಗಿರುವ ಆರೋಪಿ ಹಲ್ಲೆ ನಡೆಸಿರುವುದಾಗಿ ನಮಗೆ ಅಫಿದವಿಟ್ ಸಲ್ಲಿಸಲಾಗಿದೆ. ಇದು ಗಂಭೀರವಾದ ರಾಜ್ಯದ ಕಾನೂನು ಸುವ್ಯವಸ್ಥೆ ಅವ್ಯವಸ್ಥೆಯ ವಿಷಯವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಎಚ್ಚರಿಸಿದರು.

ವಕೀಲ ದುಷ್ಯಂತ್ ದವೆ ಅವರು “ಹೈಕೋರ್ಟು ಪ್ರಕರಣದ ತೀವ್ರತೆ ತಿಳಿಯದೆ ಆಶಿಸ್ ಮಿಶ್ರಾಗೆ ಜಾಮೀನು ನೀಡಿರುವುದು ತರವಲ್ಲ. ಅದನ್ನು ರದ್ದು ಪಡಿಸಬೇಕು” ಎಂದು ಕೇಳಿಕೊಂಡರು.  ಈಗ ನೋಟಿಸ್ ನೀಡಿದ್ದೇನೆ. ಹೋಳಿಯ ಬಳಿಕ ಉತ್ತರ ಪ್ರದೇಶದ ಕ್ರಮ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸುವುದಾಗಿ ಸುಪ್ರೀಂ ಕೋರ್ಟು ತಿಳಿಸಿತು.



Join Whatsapp