ಭಾರತೀಯ ವಿಮಾನ ಮತ್ತು ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಕಡ್ಡಾಯವಲ್ಲ; ಕೇಂದ್ರ ಸರಕಾರ

Prasthutha|

ನವದೆಹಲಿ: ಭಾರತದ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಯಾವಾಗಲೂ ಭಾರತೀಯ ಹಾಡುಗಳನ್ನೇ ಹಾಕಬೇಕು ಎಂಬ ನಿಯಮ ರೂಪಿಸುವ ಹಾಗೂ ಈ ಕುರಿತು ಆದೇಶ ಹೊರಡಿಸುವ ಚಿಂತನೆ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

- Advertisement -

ವಿಮಾನ ನಿಲ್ದಾಣ ಹಾಗೂ ವಿಮಾನಗಳಲ್ಲಿ ಭಾರತದ ಹಾಡುಗಳನ್ನು ಹಾಕಬೇಕು ಎನ್ನುವ ಕುರಿತು ಉತ್ತೇಜನ ನೀಡಬೇಕು ಎಂದು ‘ಇಂಡಿಯನ್‌ ಕೌನ್ಸಿಲ್‌ ಆಫ್‌ ಕಲ್ಚುರಲ್‌ ರಿಲೇಷನ್ಸ್‌ (ಐಸಿಸಿಆರ್‌)’ ಸಂಸ್ಥೆಯು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಳೆದ ಡಿ.23ರಂದು ಮನವಿ ಮಾಡಿತ್ತು ಅದರಂತೆ, ನಾಗರಿಕ ವಿಮಾನಯಾನ ಸಚಿವಾಲಯವು ಡಿ.27ರಂದು ಎಲ್ಲ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಭಾರತದ ಸಂಗೀತಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿತ್ತು.

‘ಕೇಂದ್ರ ಸರಕಾರವು ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಭಾರತದ ಸಂಗೀತ ಪ್ಲೇ ಮಾಡಲು ಆದ್ಯತೆ ನೀಡಿ ಎಂದು ಹೇಳಿದೆಯೇ ಹೊರತು, ಅದೇ ಕಡ್ಡಾಯ ಎಂದು ಆದೇಶಿಸಿಲ್ಲ. ಮುಂದಿನ ದಿನಗಳಲ್ಲೂ ಇದನ್ನು ಕಡ್ಡಾಯಗೊಳಿಸುವ ಚಿಂತನೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.



Join Whatsapp