ಭಾರತ ಹಾಕಿ ತಂಡದ ಆಯ್ಕೆ ಸಮಿತಿಗೆ ಕೊಡಗಿನ ವಿ.ಆರ್.ರಘುನಾಥ್ ಆಯ್ಕೆ

Prasthutha|

ಮಡಿಕೇರಿ: ಭಾರತ ಹಾಕಿ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ ಕೊಡಗಿನ ಮಾಜಿ ಹಾಕಿ ಆಟಗಾರ ವಿ.ಆರ್.ರಘುನಾಥ್  ಆಯ್ಕೆಯಾಗಿದ್ದಾರೆ.

- Advertisement -

ಪುರುಷರ ಹಾಕಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹರ್ಬಿಂದರ್ ಸಿಂಗ್ ಹಾಗೂ ಮಹಿಳಾ ತಂಡದ ಸಮಿತಿ ಅಧ್ಯಕ್ಷರಾಗಿ ಸೈಯದ್ ಅಲಿ ಅವರಿದ್ದಾರೆ. ಸದಸ್ಯರುಗಳಾಗಿ ಮೊಹಮ್ಮದ್ ರಿಯಾಜ್, ದಿಲೀಪ್ ಟರ್ಕಿ, ವಿ.ಆರ್.ರಘುನಾಥ್, ಆರ್.ಪಿ.ಸಿಂಗ್, ರಜನೀಶ್ ಮಿಶ್ರಾ, ಸರ್ದಾರ್ ಸಿಂಗ್, ಜಯದೀಪ್ ಕೌರ್, ಅಸುಂತ ಲಾಕ್ರಾ, ಸುನಿಂದು ಕೌರ್ ಆಯ್ಕೆಯಾಗಿದ್ದಾರೆ. 

ಈ ಹಿಂದೆ ಭಾರತ ಹಾಕಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಕೊಡಗಿನವರಾದ ಬಿ.ಸಿ.ಗೋವಿಂದ ಅವರು ಇದೀಗ ಮೆಂಬರ್ ಆಫ್ ಹಾಕಿ ಇಂಡಿಯಾ ಹೈಪರ್ ಫಾರ್ಮೆನ್ಸ್ ಅಂಡ್ ಡೆವಲಪ್ಮೆಂಟ್ ಕಮಿಟಿ ಹಾಗೂ ಹಾಕಿ ಇಂಡಿಯಾ ಮಾಸ್ಟರ್ಸ್ ಕಮಿಟಿಯಲಿದ್ದಾರೆ.

- Advertisement -

ಇದೀಗ ಅಯ್ಕೆ ಸಮಿತಿಗೆ ವಿ.ಆರ್.ರಘುನಾಥ್ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

Join Whatsapp