ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪು ನಿರಾಶಾದಾಯಕ: ಶಾಹಿದಾ ಅಸ್ಲಂ

Prasthutha|

ಮಂಗಳೂರು: ಹಿಜಾಬ್ ವಿಷಯದಲ್ಲಿ ನ್ಯಾಯ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್ ತೀರ್ಪು ಬರದಿರುವುದು ಅತ್ಯಂತ ನಿರಾಶಾದಾಯಕ ಮತ್ತು ಖೇದಕರ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಶಾಹಿದಾ ಅಸ್ಲಂ ಹೇಳಿದ್ದಾರೆ.

- Advertisement -

ಪ್ರಸ್ತುತ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಈ ಮೂಲಕ ಸಂವಿಧಾನಿಕ ಮೂಲಭೂತ ಹಕ್ಕು, ವೈಯಕ್ತಿಕ ಹಕ್ಕನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೆ ಹಕ್ಕು, ನ್ಯಾಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಆದರೆ ನ್ಯಾಯಾಲಯ ಈ ತೀರ್ಪನ್ನು ರಕ್ಷಿಸುವ ಬದಲು ಅದನ್ನು ಕಿತ್ತುಕೊಂಡಿದೆ ಎಂದು ಹೇಳಿದರು.

 ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಷಡ್ಯಂತರ ನಡೆಯುತ್ತಿದೆ. ಅದೇ ರೀತಿ ರಾಜಕೀಯ ಉದ್ದೇಶದಿಂದ ಒಂದು ಸಮುದಾಯದ ಹೆಣ್ಣು ಮಕ್ಕಳ ಭವಿಷ್ಯದಲ್ಲಿ ಫ್ಯಾಶಿಸ್ಟ್ ಗಳು ಚೆಲ್ಲಾಟ ಆಡುತ್ತಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶದಿಂದ ಅನೇಕ ಹೆಣ್ಣು ಮಕ್ಕಳು ಶಿಕ್ಷಣದಿಂದ ಈಗಾಗಲೇ ವಂಚಿತರಾಗಿದ್ದಾರೆ. ಕೋರ್ಟಿನ ತೀರ್ಪು ಸಂತ್ರಸ್ತ ಹೆಣ್ಣು ಮಕ್ಕಳ ಪರ ವಾಗಬೇಕಿತ್ತು. ಆದರೆ ಇದು ಸಂಪೂರ್ಣವಾಗಿ ಅವರ ಭವಿಷ್ಯದಲ್ಲಿ ಚೆಲ್ಲಾಟಮಾಡುತ್ತಿದ್ದಂತೆ ಕಾಣುತ್ತಿದೆ. ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ನ್ಯಾಷನಲ್ ವುಮೆನ್ಸ್ ಫ್ರಂಟ್ ವಿದ್ಯಾರ್ಥಿಗಳ ಪರ ನಿಲ್ಲುತ್ತದೆ ಎಂದು ಅವರು ಹೇಳಿದರು.



Join Whatsapp