ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಖೇದಕರ: ರಫೀವುದ್ದೀನ್ ಕುದ್ರೋಳಿ

Prasthutha|

ಮಂಗಳೂರು: ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪು ಖೇದಕರ ಎಂದು ಮುಸ್ಲಿಮ್ಸ್ ಜಸ್ಟೀಸ್ ಫೋರಂ ಅಧ್ಯಕ್ಷ ಹಾಗೂ ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಹೇಳಿದ್ದಾರೆ.

- Advertisement -

‘ಪ್ರಸ್ತುತ’ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಸಾಂವಿಧಾನಿಕ ಹಕ್ಕುಗಳ ವಿರುದ್ಧವಾಗಿದೆ. ಹಿಜಾಬ್ ಎಂಬುದು ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿರುವುದು ಅಸಂಬದ್ಧದಿಂದ ಕೂಡಿದೆ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದ್ದು, ಇದಕ್ಕೆ ಕುರ್ ಆನ್ ಮತ್ತು ಹದೀಸ್ ಗಳೇ ಆಧಾರವಾಗಿದೆ. ಹೀಗಿರುವಾಗ ನ್ಯಾಯಪೀಠ ಈ ರೀತಿಯ ತೀರ್ಪು ನೀಡಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಿದರು.

ಜಗತ್ತಿನಾದ್ಯಂತ ಮುಸ್ಲಿಮ್ ಮಹಿಳೆಯರು ಭಾಷೆ, ಪ್ರದೇಶದ ಭೇದವಿಲ್ಲದೆ ಹಿಜಾಬ್ ಧರಿಸುತ್ತಾರೆ. ಇದು ಐಚ್ಛಿಕವಾದ ವಿಷಯವಲ್ಲ. ಕಡ್ಡಾಯವಾಗಿ ಮಹಿಳೆಯರು ಹಿಜಾಬ್ ಧರಿಸಬೇಕು. ವಾಸ್ತವ ಹೀಗಿರುವಾಗ ಹೈಕೋರ್ಟ್ ಯಾವ ಆಧಾರದಲ್ಲಿ ಹಿಜಾಬ್ ವಿರುದ್ಧ ಆದೇಶ ನೀಡಿದೆ ಎಂದು ಅವರು ಪ್ರಶ್ನಿಸಿದರು.

Join Whatsapp