ಇಸ್ಲಾಮಿಕ್ ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸುವ ಕರ್ನಾಟಕ ಹೈಕೋರ್ಟ್ ತೀರ್ಪು ಒಪ್ಪಲು ಸಾಧ್ಯವಿಲ್ಲ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

Prasthutha|

ನವದೆಹಲಿ: ಹಿಜಾಬ್ ನಿಷೇಧ ತೀರ್ಪು ಅಸಾಂವಿಧಾನಿಕವಾದುದು. ಇಸ್ಲಾಮಿಕ್ ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸುವ ಕರ್ನಾಟಕ ಹೈಕೋರ್ಟ್ ತೀರ್ಪುನ್ನು ಮುಸ್ಲಿಮರು ಒಪ್ಪಿಕೊಳ್ಳಬಾರದು ಎಂದು ಆಲ್ ಇಂಡಿಯಾ ಇಮಾಮ್ಸ್  ಕೌನ್ಸಿಲ್  ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವಿ ಸಾಬ್  ಹೇಳಿದ್ದಾರೆ.

- Advertisement -

ಸಂವಿಧಾನವು ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕಾದ ಗೌರವಾನ್ವಿತ ನ್ಯಾಯಾಲಯ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯ ತೀರ್ಪು ನೀಡುವಂತಹ ಪರಿಸ್ಥಿತಿಗೆ ಬಂದು ಮುಟ್ಟಿದ್ದು  ದೇಶದ ಯಾವುದೇ ನಾಗರಿಕನಿಗೆ, ಜಾತ್ಯತೀತ ಆತ್ಮಸಾಕ್ಷಿಗೆ ನೋವು ನೀಡುವ ಆಘಾತಕಾರಿ ವಿಷಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಜಾಬ್ ಅಥವಾ ಶಿರವಸ್ತ್ರ ದೇಶದ ಎಲ್ಲಾ ಧರ್ಮಗಳಲ್ಲಿ ಕಂಡುಬರುವ ಧಾರ್ಮಿಕ ಸಂಪ್ರದಾಯವಾಗಿದೆ. ಅದನ್ನು ಮುಸ್ಲಿಮರಿಗೆ ಮಾತ್ರ ತಡೆಯುವುದು ವಿಚಾರಧಾರೆಯ ಮನೋಸ್ಥಿತಿ ಆಗಿದೆ. ಪ್ರಜೆಗೆ ತನಗೆ ಬೇಕಾದಂತೆ ಬಟ್ಟೆ ಧರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಇದು ಎಲ್ಲಾ ಪಠ್ಯಪುಸ್ತಕಗಳಲ್ಲೂ ಉಲ್ಲೇಖವಾಗಿದೆ.  ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ ಎಂದು ಪವಿತ್ರ ಕುರ್ ಆನ್ ಸ್ಪಷ್ಟವಾಗಿ ಹೇಳುತ್ತದೆ. ಈ ತೀರ್ಪಿನ ಮೂಲಕ ನ್ಯಾಯಾಲಯವು ಅದೇ ಸಮಯದಲ್ಲಿ ಅನಗತ್ಯವಾಗಿ  ಸಂವಿಧಾನ ಮತ್ತು ಕುರ್ ಆನ್ ಅನ್ನು ತಪ್ಪಾಗಿ ನಿರೂಪಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಾಬರಿ ಮಸೀದಿ ತೀರ್ಪು ಸತ್ಯಾಸತ್ಯತೆಗಳನ್ನು ಮೀರಿ ಇತರರ  ನಂಬಿಕೆಗಳು ಮತ್ತು ಭಾವನೆಗಳನ್ನು ಆಧರಿಸಿದಂತೆಯೇ, ಕರ್ನಾಟಕ ಹೈಕೋರ್ಟ್ ತೀರ್ಪು ಕಾನೂನು ಮತ್ತು ಸತ್ಯಗಳನ್ನು ಬದಲಿಸಿದೆ ಮತ್ತು ನಿರ್ದಿಷ್ಟ ವಿಭಾಗದ ಭಾವನೆಗಳಿಗೆ ಮಹತ್ವವನ್ನು ನೀಡಿದೆ. ಈ ಪ್ರವೃತ್ತಿ ದೇಶದ ಭವಿಷ್ಯಕ್ಕೆ ಅಪಾಯ ತಂದೊಡ್ಡುತ್ತಿದೆ. ದೇಶದಲ್ಲಿ ಸಂಘ ಪರಿವಾರದ ಫ್ಯಾಶಿಸಂ ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಸಂವಿಧಾನಾತ್ಮಕ ಸಂಸ್ಥೆಗಳನ್ನು ಒಂದೊಂದಾಗಿ ದುರುಪಯೋಗ ಪಡಿಸಿ ಸಾಂವಿಧಾನಿಕವಾದ ಹಕ್ಕನ್ನು  ಕಸಿಯುತ್ತಿರುವಾಗ, ಈ ದುಷ್ಕೃತ್ಯವನ್ನು ಖಂಡಿಸಿ ಪ್ರತಿಭಟಿಸಿ ನ್ಯಾಯ ಸಿಗುವವರೆಗೂ  ಹೋರಾಡುವುದು ಸಮಸ್ತ ಭಾರತೀಯರಿಗೆ ಅನಿವಾರ್ಯ ಸಮಯ ಬಂದಿದೆ, ಈಗಿನ ಕರ್ತವ್ಯವೂ ಆಗಿದೆ ಎಂದು ಮೌಲಾನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp