ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನಿಂದ ಮಹಿಳಾ ಸ್ವಾತಂತ್ರ್ಯದ ಹರಣ: ವಿಮ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನಿಮ್

Prasthutha|

ಮಂಗಳೂರು: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟಿನ ತೀರ್ಪು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ನೀಡಲಾದ ಸ್ವಾತಂತ್ರ್ಯದ ದಮನವಾಗಿದ್ದು, ಈ ತೀರ್ಪು ನಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡಿದೆ ಎಂದು ವಿಮ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಹೈಕೋರ್ಟ್ ಈ ತೀರ್ಪಿನ ಮೂಲಕ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಸಂವಿಧಾನದಡಿಯಲ್ಲಿ ನೀಡಲಾದ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿದೆ. ಅಲ್ಲದೆ ಇದು ರಾಜಕೀಯ ಪ್ರೇರಿತ ಹಾಗೂ ಬಲಪಂಥೀಯರನ್ನು ಸಂತುಷ್ಟಗೊಳಿಸಲು ನೀಡಿದ ತೀರ್ಪಾಗಿದೆ. ಏಕೆಂದರೆ ಪವಿತ್ರ ಗ್ರಂಥವಾದ ಕುರ್ ಆನಿನಲ್ಲಿ ಹಿಜಾಬ್ ಅನ್ನುವುದು ಅತ್ಯಗತ್ಯ ಭಾಗವಾಗಿದೆ ಎಂದು ಉಲ್ಲೇಖವಾಗಿರುವುದರಿಂದ ಇಸ್ಲಾಮಿನ ವಿಧಿ ತೀರ್ಪು ಕೋರ್ಟ್ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಜಾಬ್ ಎನ್ನುವುದು ಮುಸ್ಲಿಮ್ ಮಹಿಳೆಯರಿಗೆ ಇಸ್ಲಾಮಿನ ಅವಿಭಾಜ್ಯ ಅಂಗವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವು ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಈ ತೀರ್ಪು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ಅಧಿಕೃತ ಕಾರ್ಯವಿಧಾನವಾಗಿದೆ. ಈ ತೀರ್ಪಿನ ವಿರುದ್ಧ ಕಾನೂನಾತ್ಮಕ ಹೋರಾಟವು ಮುಂದುವರಿಯಲಿದೆ ಎಂದು ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp