ಸದ್ಯ ವ್ಯಾಪಕ ಚರ್ಚೆಗೀಡಾಗಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕಂಡು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಕಣ್ಣೀರು ಹಾಕಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿತ್ರಮಂದಿರದಲ್ಲಿ ಅಡ್ವಾಣಿ ಕಣ್ಣೀರು ಹಾಕಿರುವ ವೀಡಿಯೋ ತುಣುಕೊಂದಕ್ಕೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಯ ಬಳಿಕ ಅಡ್ವಾಣಿ ಕಣ್ಣೀರು ಸುರಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ವಿಡಿಯೋ ಸತ್ಯಕ್ಕೆ ದೂರವಾಗಿದೆ.
ವೀಡಿಯೋದಲ್ಲಿ ಅಡ್ವಾಣಿ ಕಣ್ಣೀರು ಹಾಕಿದ್ದು ಸತ್ಯವಾದರೂ, ನೋಡಿದ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್ ಅಲ್ಲ ! ಬದಲಾಗಿ 2020ರಲ್ಲಿ ತೆರೆಕಂಡಿದ್ದ ವಿಧು ವಿನೋದ್ ಚೋಪ್ರಾ ನಿರ್ದೇಶನದ ಶಿಕಾರ ಸಿನಿಮಾ. ಶಿಕಾರ ಸಿನಿಮಾ ವೀಕ್ಷಣೆಯ ಬಳಿಕ ಅಡ್ವಾಣಿ ಭಾವನತ್ಮಕವಾಗಿ ಕಣ್ಣೀರು ಹಾಕಿದ್ದರು. ಈ ವೀಡಿಯೋವನ್ನು ಸ್ವತಹ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು 2020ರ ಫೆ.7ರಂದು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಮತ್ತದೇ ವೀಡಿಯೋ ವೈರಲ್ ಆಗಿದೆ.