ಹೆರಿಗೆ ವಾರ್ಡ್ ಮೇಲೆ ರಷ್ಯಾ ಬಾಂಬ್ ದಾಳಿ: ಗರ್ಭಿಣಿ ಮಹಿಳೆ, ಮಗು ಸಾವು

Prasthutha|

ಕೀವ್: ಯುದ್ಧಪೀಡಿತ ಉಕ್ರೇನ್’ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ಭೀಕರ ಬಾಂಬ್ ದಾಳಿಯಿಂದಾಗಿ ಗರ್ಭಿಣಿ ಮತ್ತು ಆಕೆಯ ಮಗು ಸಾವನ್ನಪ್ಪಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಮಹಿಳೆಯನ್ನು ಸ್ಟ್ರೆಚರ್ ನಲ್ಲಿ ಅಂಬ್ಯುಲೆನ್ಸ್ ತಳ್ಳುತ್ತಿರುವ ವೀಡಿಯೋ ಪ್ರಪಂಚದಾದ್ಯಂತ ವೈರಲ್ ಆಗಿದ್ದು, ಇದೊಂದು ಮಾನವೀಯತೆ ಮೇಲಿನ ಅತ್ಯಂತ ಅಮಾನುಷ ದಾಳಿ ಎಂದು ಬಣ್ಣಿಸಲಾಗಿದೆ.

ರಷ್ಯಾ ಪಡೆಗಳು ಆಸ್ಪತ್ರೆ ಮೇಲೆ ದಾಳಿ ನಡೆಸುತ್ತಿರುವುದನ್ನು ಪತ್ರಕರ್ತರು ಪೋಟೋ ಮತ್ತು ವೀಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ದಾಳಿ ಮಾಡಿದ ಮರಿಯುಪೋಲ್ ನಗರದಲ್ಲಿ ರಕ್ಷಣಾ ಪಡೆಗಳು ಅವಶೇಷಗಳಡಿಯಲ್ಲಿ ರಕ್ತಸಿಕ್ತವಾಗಿ ಸಿಲುಕಿದ ಅಕೆಯನ್ನು ಆಂಬ್ಯುಲೆನ್ಸ್ ಕಡೆಗೆ ಸ್ಟ್ರಚ್ಚರ್ ನಲ್ಲಿ ಸಾಗಿಸಲಾಯಿತ್ತಾದರೂ ಅದಾಗಲೇ ಆಕೆ ಮತ್ತು ಮಗು ಮೃತಪಟ್ಟಿರುವುದು ದೃಢವಾಗಿದೆ. ಇದು 19 ದಿನಗಳ ಉಕ್ರೇನ್ ಮೇಲಿನ ದಾಳಿಯ ಅತ್ಯಂತ ಕ್ರೂರ ಕ್ಷಣಗಳಲ್ಲೊಂದಾಗಿದೆ.

- Advertisement -

ಮಾತ್ರವಲ್ಲ ಹಲವಾರ ಗರ್ಭಿಣಿಯರು ರಕ್ತದೋಕುಳಿಯೊಂದಿಗೆ ಹೆರಿಗೆ ವಾರ್ಡ್ ನಿಂದ ಪಲಾಯನ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆಯನ್ನು ಪತ್ರಕರ್ತರು ಸೆರೆ ಹಿಡಿದಿದ್ದಾರೆ.

Join Whatsapp