ಭೋಪಾಲ್: ಸಾರಾಯಿ ಅಂಗಡಿವೊಂದಕ್ಕೆ ಕಲ್ಲು ಎಸೆದು ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ದಾಂಧಲೆ ನಡೆಸಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾ ಭಾರತಿ ಈ ಹಿಂದೆಯೇ ರಾಜ್ಯಾದ್ಯಂತ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿದ್ದರು. ಅಲ್ಲದೇ, ಸಾರಾಯಿ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.
ಭಾನುವಾರ, ಸಾರಾಯಿ ಅಂಗಡಿಗಳ ಮುಂದೆ ತನ್ನ ಬೆಂಬಲಿಗರ ಜೊತೆ ಪ್ರತಿಭಟನೆ ನಡೆಸಿದ ಉಮಾ ಭಾರತಿ ನೇರವಾಗಿ ಮದ್ಯದಂಗಡಿಯೊಂದಕ್ಕೆ ಆಗಮಿಸಿ ಕಲ್ಲೊಂದನ್ನು ಎತ್ತಿ ಎಸೆದಿದ್ದಾರೆ. ಸ್ವತಃ ಕಲ್ಲು ಎಸೆದು ಮದ್ಯದ ಬಾಟಲಿಗಳನ್ನು ಪುಡಿಗಟ್ಟಿದ ವೀಡಿಯೋವನ್ನ ಉಮಾ ಭಾರತಿ ಅವರೇ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರುಷ ಜನವರಿ 15 ರೊಳಗಾಗಿ ಮದ್ಯ ನಿಷೇಧಿಸದಿದ್ದರೆ ದೊಣ್ಣೆಗಳನ್ನು ಹಿಡಿದು ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ, ಎರಡು ದಿನಗಳ ಹಿಂದಷ್ಟೇ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರವು ವಿದೇಶಿ ಮದ್ಯಗಳ ಅಬಕಾರಿ ಸುಂಕವನ್ನು ಶೇ. 10-13 ಇಳಿಕೆ ಮಾಡಿತ್ತು.