ಕಾಂಗ್ರೆಸ್’ಗೆ ಹೀನಾಯ ಸೋಲು: ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ನಾಯಕರು CWC ಸಭೆಗೆ ಗೈರು !

Prasthutha|

ನವದೆಹಲಿ: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್’ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (CWC) ಗೆ ಪಕ್ಷದ ಮಾಜಿ ಪ್ರಧಾನಿ,ಹಿರಿಯರಾದ ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಗೈರು ಹಾಜರಿದ್ದರು ಎಂದು ಹೇಳಲಾಗಿದೆ.

- Advertisement -

ಭಾನುವಾರ ಸಂಜೆ 4 ಗಂಟೆಯ ಆರಂಭವಾದ ಸಭೆಗೆ ಆಹ್ವಾನಿಸಲಾದ ಒಟ್ಟು 57 ಕಾಂಗ್ರೆಸ್ ನಾಯಕರ ಪೈಕಿ ಮಾಜಿ ರಕ್ಷಣ ಸಚಿವ ಎ.ಕೆ. ಆ್ಯಂಟನಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಹಿರಿಯ ನಾಯಕರು ಸಭೆಯಿಂದ ಹೊರಗುಳಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸಕ್ತ ಈ ಸಭೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ, ಪಿ.ಚಿದಂಬರಂ, ಅಶೋಕ್ ಗೆಹ್ಲೋಟ್, ಅಧಿರಾಜನ್ ಚೌಧರಿ, ಜಿತೇಂದ್ರ ಭವಾರ್ ಸಿಂಗ್, ಡಾ. ಅಜೋಯ್ ಕುಮಾರ್, ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಭೂಪೇಶ್ ಭಾಗೇಲ್, ತಾರಿಖ್ ಅನ್ವರ್ ಮತ್ತು ಹರೀಶ್ ರಾವತ್ ಭಾನುವಾರ ಸಂಜೆ 4 ಗಂಟೆಗೆ ಸಭೆಗೆ ಆಗಮಿಸಿದ್ದನ್ನು ಮಾಧ್ಯಮಗಳು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

- Advertisement -

ಈ ಮಧ್ಯೆ ಎ.ಕೆ. ಆ್ಯಂಟನಿ ಅವರ ಅನುಪಸ್ಥಿತಿಯ ಕುರಿತು ಅವರ ಮಗ ಅನಿಲ್ ಟ್ವೀಟ್ ಮೂಲಕ ದೃಢಪಡಿಸಿದ್ದು, “ಇಂದಿನ CWC ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ಅವರು ತುಂಬಾ ನಿರಾಶೆಗೊಂಡಿದ್ದಾರೆ” ಎಂದು ಅವರ ಮಗ ಅನಿಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅನಾರೋಗ್ಯದ ಕಾರಣದಿಂದ ಸಭೆಯನ್ನು ತಪ್ಪಿಸಿಕೊಂಡಿದ್ದರು. ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಲಾಗಿದ್ದು,ಇದೇ ಕಾರಣದಿಂದಾಗಿ ಉನ್ನತ ಮಟ್ಟದ ಸಭೆಗೆ ಈ ನಾಯಕರು ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಸಕ್ತ ಕಾಂಗ್ರೆಸ್ ಮಹತ್ವದ ಸಭೆಯಲ್ಲಿ ಪಂಚ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಮಾತ್ರವಲ್ಲ ಸೋಮವಾರ ಪುನರಾರಂಭಗೊಳ್ಳುವ ಸಂಸತ್ತಿನ ಬಜೆಟ್ ಅಧಿವೇಶನದ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರದ ಕುರಿತು ಚರ್ಚಿಸಲು CWC ಸಭೆಯನ್ನು ಕರೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಇಂದು ಬೆಳಿಗ್ಗೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಕೆ ಸುರೇಶ್ ಮತ್ತು ಜೈರಾಮ್ ರಮೇಶ್ ಉಪಸ್ಥಿತರಿದ್ದರು.



Join Whatsapp