ಪ್ರಧಾನಿ ಮೋದಿ ಸುಳ್ಳು ನಿರೂಪಣೆಗೆ ಬಲಿಯಾಗದಿರಲಿ: ಪ್ರಶಾಂತ್ ಕಿಶೋರ್ ಆಕ್ರೋಶ

Prasthutha|

ಪಂಚರಾಜ್ಯ ಫಲಿತಾಂಶ 2024 ರ ಚುನಾವಣೆಗೆ ದಿಕ್ಸೂಚಿ ಎಂಬ ಮೋದಿ ಹೇಳಿಕೆಗೆ ಚುನಾವಣಾ ತಂತ್ರಜ್ಞ ತಿರುಗೇಟು

- Advertisement -

ನವದೆಹಲಿ: ಪಂಚರಾಜ್ಯ ಫಲಿತಾಂಶದಿಂದ ಉತ್ಸುಕಗೊಂಡು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಈ ಫಲಿತಾಂಶವು 2024 ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿರುಗೇಟು ನೀಡಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ರಾಜ್ಯದ ಚುನಾವಣೆಯು, ಲೋಕಸಭಾ ಚುನಾವಣೆಗಿಂತ ವಿಭಿನ್ನವಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಸುಳ್ಳು ನಿರೂಪಣೆಗೆ ಬಲಿಯಾಗದಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಪ್ರಧಾನಿ, ಪಂಚರಾಜ್ಯ ಫಲಿತಾಂಶವು 2024 ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದ್ದರು.

- Advertisement -

ಪ್ರಧಾನಿ ಮೋದಿಯ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಭಾರತಕ್ಕಾಗಿ ನಡೆಯುವ 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಇತ್ತೀಚೆಗೆ ನಡೆದ ಪಂಚರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ನಿರ್ಧರಿತವಾಗಿಲ್ಲ. ಈ ಬಗ್ಗೆ ಮೋದಿಗೆ ಚೆನ್ನಾಗಿ ಅರಿವಿದ್ದು, ವಿರೋಧ ಪಕ್ಷಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುವ ಸಲುವಾಗಿ ನೀಡಿದ ಹೇಳಿಕೆ ಎಂದಿಗೂ ಫಲ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಸುಳ್ಳು ನಿರೂಪಣೆಗೆ ಬಲಿಯಾಗದಿರುವಂತೆ ಅವರು ಪ್ರಧಾನಿಗೆ ಸೂಚಿಸಿದ್ದಾರೆ.

ಸದ್ಯ ಟಿಎಂಸಿ ಮತ್ತು ಎನ್.ಸಿ.ಪಿಯೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಪ್ರಶಾಂತ್ ಕಿಶೋರ್ ಅವರು 2024 ರಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ಹೇಳಲಾಗಿದೆ.



Join Whatsapp