ಮಹಿಳಾ ರಾಜ್ಯ ಮಣಿಪುರದಲ್ಲಿ ಗೆಲುವಿನ ನಗೆ ಬೀರಿದ ಪಂಚ ಮಹಿಳೆಯರು

Prasthutha|

ಮಣಿಪುರ: ಮಣಿಪುರ ವಿಧಾನಸಭೆಯ 60 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಐವರು ಮಹಿಳೆಯರು ಗೆಲುವನ್ನು ಸಾಧಿಸಿ ದಾಖಲೆ ಬರೆದಿದ್ದಾರೆ. ಎಸ್. ಎಸ್. ಒಲಿಶ್, ನೆಮ್ಚಾ ಕಿಪ್ಗೆನ್, ಸಗೊಲ್ಶೆನ್ ಕೆಬಿ ದೇವಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವನ್ನು ಕಂಡರೆ, ಎನ್‌ಪಿಪಿ ಪಕ್ಷದಿಂದ ನಳಿನಿದೇವಿ, ಪಕ್ರುಂಬ ಸುಮತಿ ದೇವಿ ಗೆಲುವಿನ ನಗೆ ಬೀರಿದ್ದಾರೆ.

- Advertisement -

ಚುನಾವಣಾ ಕಣದಲ್ಲಿ ಒಟ್ಟು 265 ಸ್ಪರ್ಧಿಗಳ ಪೈಕಿ 17 ಜನ ಮಹಿಳಾ ಸ್ಪರ್ಧಿಗಳು ಅಖಾಡದಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 11 ಮಂದಿ ಮಹಿಳೆಯರು ಸ್ಪರ್ಧಿಸಿದ್ದು ಇಬ್ಬರು ಗೆದ್ದಿದ್ದರು.ಈ ಬಾರಿ ಮಹಿಳಾ ಶಾಸಕಿಯರ ಸಂಖ್ಯೆ ಐದಕ್ಕೆ ಏರಿಕೆ ಕಂಡಿದೆ.

1990ರಲ್ಲಿ ಮಣಿಪುರದ ಮೊದಲ ಮಹಿಳಾ ಶಾಸಕಿಯಾಗಿ ಹಂಗ್ಮಿಲಾ ಗೆಲುವನ್ನು ಸಾಧಿಸಿದ್ದರು.

Join Whatsapp