ಮಡಿಕೇರಿ: ತಂದೆ, ಮಗ ಆತ್ಮಹತ್ಯೆ

Prasthutha|

ಮಡಿಕೇರಿ: ತಂದೆ ಹಾಗೂ ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ.

- Advertisement -

ತಂದೆ ಸುಬ್ಬಯ್ಯ (76) ಹಾಗೂ ಮಗ ಗಿರೀಶ್ (39) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಾ.7 ರಂದು ಸಂಜೆ ಮಂಡಲ ಕಚೇರಿಗೆ ಹೋಗಿ ಬರುವುದಾಗಿ ತೆರಳಿದ್ದ ಸುಬ್ಬಯ್ಯ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಮೀಪದ ತೋಟವೊಂದರಲ್ಲಿ ಪತ್ತೆಯಾಗಿತ್ತು. ಇದರಿಂದ ಮನನೊಂದ ಪುತ್ರ ಗಿರೀಶ್ ಮಾ.8 ರಂದು ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.



Join Whatsapp