ಬಿಜೆಪಿಯನ್ನು ನಿರ್ಮೂಲನೆ ಮಾಡಲು ರಾಜಕೀಯ ಪಕ್ಷಗಳು ಒಗ್ಗೂಡಬೇಕಿದೆ: ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತಾ: 2024ರಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕಾದರೆ ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

- Advertisement -

ಉತ್ತರ ಪ್ರದೇಶ, ಬಿಹಾರ, ತ್ರಿಪುರಾ, ಅಸ್ಸಾಂ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಭದ್ರ ಕೋಟೆಗಳನ್ನು ನಿರ್ಮಿಸಲು ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯವಿಲ್ಲದ ಕಾರಣ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಪರ್ಯಾಯ ಶಕ್ತಿ ಬಂದ ಮೇಲೆ ಬಿಜೆಪಿ ಅಧಿಕಾರದಲ್ಲಿ ಉಳಿಯುವುದಿಲ್ಲ. ಆದ್ದರಿಂದ ಪರ್ಯಾಯ ಶಕ್ತಿ ರೂಪಿಸಲು ರಾಜಕೀಯ ಪಕ್ಷಗಳು ಒಗ್ಗೂಡಬೇಕಿದೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಉದ್ದೇಶವನ್ನು ಪೂರೈಸಲಾಗದು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.

- Advertisement -

ತೃಣಮೂಲ ಕಾಂಗ್ರೆಸ್ ಒಂದು ದಶಕದಿಂದ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳವನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಮೂರು ತಿಂಗಳ ಅವಧಿಯಲ್ಲಿ ಟಿಎಂಸಿಯ ಚಿಹ್ನೆ ಹಲವು ಮನೆಗಳಿಗೆ ತಲುಪಿರುವುದು ನಮಗೆ ಸಂತಸ ತಂದಿದೆ. ನಾವು ಮೊದಲೇ ಇದನ್ನು ಪ್ರಾರಂಭಿಸಿದ್ದರೆ ಮತ್ತಷ್ಟು ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂದು ಹೇಳಿದರು.

2023ರಲ್ಲಿ ರಾಜ್ಯ ಪಂಚಾಯತ್ ಹಾಗೂ 2024ರಲ್ಲಿ ಸಂಸತ್ ಚುನಾವಣೆಗಳು ನಡೆಯಲಿದ್ದು, ಟಿಎಂಸಿ ವರಿಷ್ಠರು ಚುನಾವಣಾ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

Join Whatsapp