30 ವರ್ಷಗಳ ಬಳಿಕ ಅರಾರ್ ನಲ್ಲಿ ಸೌದಿ-ಇರಾಕ್ ಗಡಿ ತೆರೆದ ಉಭಯ ರಾಷ್ಟ್ರಗಳು

Prasthutha|

ಮೂವತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಇರಾಕ್ ಮತ್ತು ಸೌದಿ ಅರೇಬಿಯಾವು ವ್ಯಾಪಾರ ಉದ್ದೇಶಗಳಿಗಾಗಿ ಅರಾರ್ ಗಡಿಯನ್ನು ತೆರೆದಿದೆ ಎಂದು ಇರಾಕಿ ಗಡಿ ಬಂದರುಗಳ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಅರಾರನ್ನು ವಿದ್ಯುಕ್ತವಾಗಿ ತೆರೆಯುವುದಕ್ಕಾಗಿ ಇರಾಕ್ ನ ಸೌದಿ ರಾಯಭಾರಿ ಮತ್ತು ಇರಾಕ್ ಆಂತರಿಕ ಸಚಿವರನ್ನೊಳಗೊಂಡಂತೆ ಉನ್ನತ ಅಧಿಕಾರಿಗಳು ಬುಧವಾರ ಬಗ್ದಾದ್ ನಿಂದ ಅರಾರ್ ಗೆ ತೆರಳಿದರು. ಬುಧವಾರ ಬೆಳಗ್ಗಿನಿಂದಲೇ ಅಲ್ಲಿ ಸರಕು ಸಾಗಾಟ ಲಾರಿಗಳು ಗಡಿ ದಾಟುವುದಕ್ಕಾಗಿ ಕಾಯುತ್ತಿದ್ದವು.

ಸೌದಿ ಅರೇಬಿಯಾ ಕಡೆಯಲ್ಲಿ ಗಡಿಯನ್ನು ತೆರೆಯುವುದಕ್ಕಾಗಿ ರಿಯಾದ್ ನಿಂದಲೂ ನಿಯೋಗವೊಂದು ಭೇಟಿ ನೀಡಿತ್ತು. ಇದರೊಂದಿಗೆ ಗಡಿಯ ಮೂಲಕ ಸರಕು ಸಾಗಾಟ ಮತ್ತು ಜನರ ಪ್ರಯಾಣ ಮರುಆರಂಭಗೊಂಡಿದೆ.

- Advertisement -

ಇರಾಕ್ ನ ಮಾಜಿ ನಾಯಕ ಸದ್ದಾಮ್ ಹುಸೈನ್ ಕುವೈಟ್ ಮೇಲೆ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧವು ಕಡಿದುಕೊಂಡ ಬಳಿಕ 1990ರಿಂದ ಅರಾರ್ ಗಡಿ ಮುಚ್ಚಿತ್ತು.



Join Whatsapp