ಮಂಗಳೂರು: ಯುದ್ಧ ಜರ್ಝರಿತ ಉಕ್ರೇನ್ ನಿಂದ ತವರಿಗೆ ಆಗಮಿಸಿದ ಉಜಿರೆಯ ವಿದ್ಯಾರ್ಥಿನಿ

Prasthutha|

ರೈಲಿನಲ್ಲಿ ಎದುರಾಗಿತ್ತು ಆತಂಕಕಾರಿ ಕ್ಷಣ

- Advertisement -

ಮಂಗಳೂರು: ಯುದ್ಧ ಜರ್ಝರಿತ ಉಕ್ರೇನ್ ನೆಲದಿಂದ ಬೆಳ್ತಂಗಡಿಯ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ ಸುರಕ್ಷಿತವಾಗಿ ತವರಿಗೆ ವಾಪಸ್ ಆಗಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹೀನಾ ಫಾತಿಮಾ ಅವರನ್ನು ಗುಲಾಬಿ ಹೂ ನೀಡಿ ಕುಟುಂಬಿಕರು ಬರ ಮಾಡಿಕೊಂಡರು.

ಈ ಸಂದರ್ಭ ‘ಪ್ರಸ್ತುತ ನ್ಯೂಸ್’ ಜೊತೆ ಮಾತನಾಡಿದ ಅವರು, “ಉಕ್ರೇನ್ ಯುದ್ಧ ಸ್ಥಿತಿಯ ಸಮಯದಲ್ಲಿ ಭಯಾನಕ ಸ್ಥಿತಿ ಎದುರು ನೋಡುವಂತಾಗಿತ್ತು. ನಮ್ಮ ಕಣ್ಣ ಮುಂದೆಯೇ ಶೆಲ್, ಬಾಂಬ್ ದಾಳಿಗಳು ನಡೆಯುತ್ತಿದ್ದವು. ಈ ಸಮಯದಲ್ಲೇ ನಾವು ಬಂಕರ್ ನಲ್ಲಿ ಆಶ್ರಯ ಪಡೆದಿದ್ದೇವು. ಅನ್ನ, ನೀರಿಗಾಗಿ ಪರದಾಡಿದ್ದೆವು. ರೈಲಿನಲ್ಲಿ ಪೋಲಂಡ್ ಗೆ ಬರುವ ಹೊತ್ತಿಗೆ ಆದ ಬಾಂಬ್ ಸ್ಫೋಟ ನೆನಪಿಸಿಕೊಂಡಾಗಲೆಲ್ಲ ನಾವು ವಾಪಸ್ ಬದುಕಿ ಬರುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ” ಎಂದು ತಿಳಿಸಿದರು.

- Advertisement -

ಅಲ್ಲದೇ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಪೋಲಂಡ್ ಗೆ ಆಗಮಿಸಿದ ಬಳಿಕ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾಗಿ ತಿಳಿಸಿದ್ದಾರೆ.

ಉಕ್ರೇನ್ ನಿಂದ ಪೋಲಂಡ್ ಗೆ ತೆರಳಿದ್ದ ಹೀನಾ ಫಾತಿಮಾ ನಿನ್ನೆಯಷ್ಟೇ ದೆಹಲಿ ಮೂಲಕವಾಗಿ ಬೆಂಗಳೂರಿಗೆ ಆಗಮಿಸಿದ್ದರು.‌ ಇಂದು ಮಂಗಳೂರಿಗೆ ವಿಮಾನ ನಿಲ್ದಾಣದ ಮೂಲಕ ತವರಿಗೆ ಆಗಮಿಸಿದರು.‌

ಹೀನಾ ಫಾತಿಮಾ ಉಕ್ರೇನ್ ನ ನ್ಯಾಶನಲ್ ಯುನಿವರ್ಸಿಟಿಯ ದ್ವಿತೀಯ ವರುಷದ MBBS ವಿದ್ಯಾರ್ಥಿನಿಯಾಗಿದ್ದಾರೆ.‌



Join Whatsapp