ಶಿರವಸ್ತ್ರ-ಕೇಸರಿ ಶಾಲು ವಿವಾದಕ್ಕೆ ಸರಕಾರ ಬೆಂಬಲ ನೀಡುತ್ತಿದೆ; ಪ್ರಿಯಾಂಕ್ ಖರ್ಗೆ ಆಕ್ರೋಶ

Prasthutha|

ಬೆಂಗಳೂರು: ದೇಶದಲ್ಲಿ ಧರ್ಮಗಳ ನಡುವೆ ಭ್ರಾತೃತ್ವತೆ ಬಲಿಷ್ಠವಾಗಿದ್ದು ಎಲ್ಲರೂ ಒಂದೇ ಎಂಬ ಸಂವಿಧಾನದ ಆಶಯದಂತೆ ನಡೆಯುತ್ತಿದ್ದರೂ ಶಿರವಸ್ತ್ರ -ಕೇಸರಿ ಶಾಲು ವಿವಾದಕ್ಕೆ ಸರಕಾರ ಬೆಂಬಲ ನೀಡುತ್ತಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

- Advertisement -

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಶನಿವಾರ ನಡೆದ ಸರಕಾರಿ ಶಾಲಾ ಕೊಠಡಿ, ಉರ್ದು ಮಾಧ್ಯಮ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಕೈಗೆ ಕೇಸರಿ ಶಾಲು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಉರ್ದು ಮಾಧ್ಯಮ ಶಾಲೆಯ ಉದ್ಘಾಟನೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಇದು ನಮ್ಮೊಳಗೆ ಭ್ರಾತೃತ್ವತೆ ಹಾಗೂ ಸಹೋದರತೆ ಇನ್ನೂ ಬಲಿಷ್ಠವಾಗಿದೆ ಎನ್ನುವುದಕ್ಕೆ ಪುರಾವೆಯಾಗಿದೆ. ಧರ್ಮದ ಆಚರಣೆಗಳು ಆಯಾ ವ್ಯಕ್ತಿಗಳ ನಡುವಿನ ವೈಯಕ್ತಿಕ ವಿಷಯ. ನಾನು ನಾಸ್ತಿಕ. ನನಗೆ ದೇವರು, ಪೂಜೆ ಇತ್ಯಾದಿ ಬಗ್ಗೆ ನಂಬಿಕೆಯಿಲ್ಲ. ನನಗೆ ಬಸವಣ್ಣನವರ ತತ್ವದ ಮೇಲೆ ಹೆಚ್ಚು ಒಲವಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ. ಆದರೆ ಯಾವುದೇ ಧಾರ್ಮಿಕ ಆಚರಣೆ ಮಾಡುವವರಿಗೆ ನನ್ನ ವಿರೋಧವಿಲ್ಲ ಎಂದು ಹೇಳಿದರು

Join Whatsapp