ಭೋಪಾಲ್ : ಮಧ್ಯಪ್ರದೇಶ ಸರಕಾರ ಏಳು ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ, ಹೊಸ ಗೋ ಸಚಿವ ಸಂಪುಟ ರಚಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ನ.22ರಂದು ಶ್ರೀಕೃಷ್ಣನಿಗೆ ಸಂಬಂಧಿಸಿದ ಹಬ್ಬ ಗೋಪಾಷ್ಟಮಿ ದಿನ ಈ ಗೋ ಸಚಿವ ಸಂಪುಟದ ಪ್ರಥಮ ಸಭೆ ನಡೆಯಲಿದೆ. ಅಗರ್ ಮಾಲ್ವಾ ಪ್ರಾಂತ್ಯದಲ್ಲಿ ಗೋ ಅಭಯಾರಣ್ಯ ಸ್ಥಾಪಿಸಲೂ ನಿರ್ಧರಿಸಲಾಗಿದೆ.
ಪಶು ಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ಮತ್ತು ಗ್ರಾಮಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಗೃಹ ಇಲಾಖೆ, ಕಿಸಾನ್ ಕಲ್ಯಾಣ್ ಇಲಾಖೆ ಮುಂತಾದ ವಿವಿಧ ಇಲಾಖೆಗಳು ಗೋ ಸಚಿವ ಸಂಪುಟದಲ್ಲಿ ಒಳಗೊಳ್ಳಲಿವೆ.