ಬಿಜೆಪಿ ನಾಯಕಿ, ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ | ಪ್ರಾಣಾಪಾಯದಿಂದ ಪಾರು

Prasthutha|

ಚೆನ್ನೈ : ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ತಮಿಳುನಾಡಿನ ಮೇಲ್ ಮತವತ್ತೂರ್ ಸಮೀಪ ನಡೆದಿದೆ. ಘಟನೆಯಲ್ಲಿ ನಟಿ ಖುಷ್ಬೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖುಷ್ಬೂ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್ ಒಂದು ಗುದ್ದಿದ ಪರಿಣಾಮ, ಅವರ ಕಾರು ಜಖಂ ಗೊಂಡಿದೆ.

- Advertisement -

ತಾವು ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್ ಗುದ್ದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ, ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸಿದ್ದೇನೆ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

- Advertisement -