ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ಹಣಾಹಣಿಗೆ ವೇದಿಕೆ ಬಹುತೇಕ ಸಿದ್ಧಗೊಂಡಿದ್ದು, ಮಾರ್ಚ್ 26 ರಂದು ಚಾಲನೆ ದೊರೆಯಲಿದೆ. ಈ ಕ್ರಿಕೆಟ್ ಪರ್ವ ಮೇ 29 ರವರೆಗೆ ಮುಂದುವರಿಯಲಿದೆ. ಪ್ರಸಕ್ತ ಸಾಲಿನ IPL ಪಂದ್ಯಾವಳಿಯು ಮಹಾರಾಷ್ಟ್ರದಲ್ಲೇ ನಡೆಯಲಿದೆ.
ಎರಡು ನೂತನ ಫ್ರಾಂಚೈಸಿಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಯಾದ ಬಳಿಕ ಪ್ರಸಕ್ತ ಋತುವಿನಲ್ಲಿ IPL ತಂಡಗಳ ಸಂಖ್ಯೆ 10 ಕ್ಕೆ ಏರಿದಂತಾಗಿದೆ.
ತಂಡ ಮತ್ತು ನಾಯಕರ ಪಟ್ಟಿ ಈ ಕೆಳಗಿನಂತಿವೆ.
1) ಚೆನ್ನೈ ಸೂಪರ್ ಕಿಂಗ್ಸ್ (CSK) – ಎಂಎಸ್ ಧೋನಿ
2) ಡೆಲ್ಲಿ ಕ್ಯಾಪಿಟಲ್ಸ್ (DC) – ರಿಷಬ್ ಪಂತ್
3) ಗುಜರಾತ್ ಟೈಟಾನ್ಸ್ (ಜಿಟಿ) – ಹಾರ್ದಿಕ್ ಪಾಂಡ್ಯ
4) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) – ಶ್ರೇಯಸ್ ಅಯ್ಯರ್
5) ಲಕ್ನೋ ಸೂಪರ್ ಜೈಂಟ್ಸ್ (LSG) – ಕೆಎಲ್ ರಾಹುಲ್
6) ಮುಂಬೈ ಇಂಡಿಯನ್ಸ್ (MI) – ರೋಹಿತ್ ಶರ್ಮಾ
7) ಪಂಜಾಬ್ ಕಿಂಗ್ಸ್ (PBKS) – ಮಯಾಂಕ್ ಅಗರ್ವಾಲ್
8) ರಾಜಸ್ಥಾನ್ ರಾಯಲ್ಸ್ (RR) – ಸಂಜು ಸ್ಯಾಮ್ಸನ್
9) ಸನ್‌ರೈಸರ್ಸ್ ಹೈದರಾಬಾದ್ (SRH) – ಕೇನ್ ವಿಲಿಯಮ್ಸನ್
10) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) – ಇನ್ನೂ ಘೋಷಿಸಲಾಗಿಲ್ಲ.
ಪ್ರಸಕ್ತ ಸಾಲಿನ ಟೂರ್ನಿಯ ವೇಳೆಯಲ್ಲಿ ಮುಂಬೈ ಮತ್ತು ಪುಣೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.
ಈ ಪಂದ್ಯಾಕೂಟದಲ್ಲಿ ಒಟ್ಟು ತಂಡಗಳನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಹಿಂದಿನ ಐಪಿಎಲ್ ಚಾಂಪಿಯನ್ ಕಿರೀಟವನ್ನು ಪಡೆದ ತಂಡಗಳ ಅರ್ಹತೆಯನ್ನು ಅವಲೋಕಿಸಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ವಿಭಾಗ A ತಂಡಗಳ ಪಟ್ಟಿ ಈ ಕೆಳಗಿನಂತಿವೆ
1) ಮುಂಬೈ ಇಂಡಿಯನ್ಸ್
2) ಕೋಲ್ಕತ್ತಾ ನೈಟ್ ರೈಡರ್ಸ್
3) ರಾಜಸ್ಥಾನ್ ರಾಯಲ್ಸ್
4) ದೆಹಲಿ ಕ್ಯಾಪಿಟಲ್ಸ್
5) ಲಕ್ನೋ ಸೂಪರ್ ಜೈಂಟ್ಸ್
ವಿಭಾಗ B ತಂಡಗಳ ಪಟ್ಟಿ ಈ ಕೆಳಗಿನಂತಿವೆ
1) ಚೆನ್ನೈ ಸೂಪರ್ ಕಿಂಗ್ಸ್
2) ಸನ್ ರೈಸರ್ಸ್ ಹೈದರಾಬಾದ್
3) ರಾಯಲ್ ಚಾಲೆಂಜರ್ಸ್ ಬೆಂಗಳೂರು
4) ಪಂಜಾಬ್ ಕಿಂಗ್ಸ್
5) ಗುಜರಾತ್ ಟೈಟಾನ್ಸ್
ಈ ಹಿಂದೆ IPL ಪಂದ್ಯಾವಳಿಗಳನ್ನು ಗೆದ್ದ ತಂಡಗಳ ಪಟ್ಟಿ ಇಂತಿವೆ
ಐಪಿಎಲ್‌ನ 14 ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಗೆದ್ದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕ್ರಮವಾಗಿ ಎರಡು ಮತ್ತು ಒಂದು ಬಾರಿ ಪ್ರಶಸ್ತಿ ಗೆದ್ದವು.ಸನ್ ರೈಸರ್ಸ್ ಹೈದರಾಬಾದ್ ಕೂಡ 2016ರಲ್ಲಿ ಒಮ್ಮೆ ಪ್ರಶಸ್ತಿ ಗೆದ್ದಿತ್ತು.
IPL ಗೆದ್ದ ತಂಡಗಳ ವಾರ್ಷಿಕ ವಿವರಗಳ ಪಟ್ಟಿ ಇಂತಿವೆ.
1) ಮುಂಬೈ ಇಂಡಿಯನ್ಸ್ (2013, 2015, 2017, 2019 ಮತ್ತು 2020)
2) ಚೆನ್ನೈ ಸೂಪರ್ ಕಿಂಗ್ಸ್ (2010, 2011, 2018 ಮತ್ತು 2021)
3) ಕೋಲ್ಕತ್ತಾ ನೈಟ್ ರೈಡರ್ಸ್ (2012 ಮತ್ತು 2014)
4) ರಾಜಸ್ಥಾನ್ ರಾಯಲ್ಸ್ (2008)
5) ಸನ್‌ರೈಸರ್ಸ್ ಹೈದರಾಬಾದ್ (2016)
6) ಐಪಿಎಲ್ 2009 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
IPL 2022 ರಲ್ಲಿ RCB ಯ ನಾಯಕನ ವಿವರ ಇಲ್ಲಿದೆ.
IPL 2021 ರ ಕೊನೆಯಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರಿಂದ ತಂಡದ ಅಭಿಮಾನಿಗಳು ಮುಂದಿನ ನಾಯಕನ ಹೆಸರನ್ನು ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ.
ಇದರಲ್ಲಿ ಮೂರು ಹೆಸರುಗಳು ಸದ್ದು ಮಾಡುತ್ತಿವೆ. ಅವರೆಂದರೆ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್. ಆದಾಗ್ಯೂ ಈ ಋತುವಿನಲ್ಲಿ ಮ್ಯಾಕ್ಸ್ ವೆಲ್ ಲಭ್ಯತೆಯು ಸಂದೇಹದಲ್ಲಿರುವುದರಿಂದ ಫ್ರಾಂಚೈಸಿಯು ಫಾಫ್ ಅಥವಾ ಕಾರ್ತಿಕ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಕಾರ್ತಿಕ್ 2015 ರಲ್ಲಿ RCB ಗಾಗಿ ಆಡಿದ್ದರೆ ಮತ್ತು ಮೊದಲು KKR ಅನ್ನು ಮುನ್ನಡೆಸಿದ್ದರು. ಫಾಫ್ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸುವಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.