ರಷ್ಯಾಕ್ಕೆ ತನ್ನ ಉತ್ಪನ್ನಗಳ ರಫ್ತು ಸ್ಥಗಿತಗೊಳಿಸಲಿರುವ ಹೋಂಡಾ, ಆ್ಯಪಲ್

Prasthutha|

ಟೋಕಿಯೊ: ಉಕ್ರೇನ್‌ ನ ಮೇಲೆ ರಷ್ಯಾ ಆಕ್ರಮಣವನ್ನು ವಿರೋಧಿಸಿ ಹೋಂಡಾ, ಆ್ಯಪಲ್ ತನ್ನ ಉತ್ಪನ್ನಗಳನ್ನು ಸ್ಥಗಿತಗೊಳಿಸಿದೆ.

- Advertisement -

ರಷ್ಯಾದ ಆಕ್ರಮಣವನ್ನು ವಿರೋಧಿಸಿರುವ ಹೋಂಡಾ ಕಂಪನಿಯು ತನ್ನ ಉತ್ಪನ್ನಗಳಾದ ಕಾರು ಮತ್ತು ಬೈಕ್‌ಗಳ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ವರದಿಯಾಗಿದೆ.

ಅಲ್ಲದೆ, ಆ್ಯಪಲ್ ಕಂಪನಿ ಈ ಬಗ್ಗೆ ಹೇಳಿಕೆ ನೀಡಿದ್ದು,  “ನಾವು ರಷ್ಯಾದಲ್ಲಿ ಎಲ್ಲಾ ಉತ್ಪನ್ನಗಳ ಮಾರಾಟವನ್ನು ವಿರಾಮಗೊಳಿಸಿದ್ದೇವೆ. ಕಳೆದ ವಾರ ನಾವು ದೇಶದಲ್ಲಿ ನಮ್ಮ ಮಾರಾಟದ ಚಾನಲ್‌ಗೆ ಎಲ್ಲಾ ರಫ್ತುಗಳನ್ನು ನಿಲ್ಲಿಸಿದ್ದೇವೆ” ಎಂದು ತಿಳಿಸಿದೆ.

- Advertisement -

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

Join Whatsapp