ಮಂಗಳೂರು: ಯುದ್ಧ ಪೀಡಿತ ಸಿಲುಕಿರುವ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸರ್ಕಾರದ ಅಂಕಿಅಂಶಗಳ ಪ್ರಕಾರ ದ.ಕ ಜಿಲ್ಲೆಯ 18 ಜನರು ಉಕ್ರೇನ್ ನಲ್ಲಿದ್ದಾರೆ. ಈಗಾಗಲೇ ಅವರ ಮನೆಯವರು ಮತ್ತು ವಿದ್ಯಾರ್ಥಿಗಳ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ನಾಲ್ವರು ಸಚಿವರನ್ನು ನೇಮಿಸಿ ಅವರನ್ನು ಕರೆ ತರುವ ಪ್ರಯತ್ನ ಆಗುತ್ತಿದೆ. ಕೆಲವರು ಈಗಾಗಲೇ ವಿಮಾನ ಹತ್ತಿದ್ದಾರೆ, ಇನ್ನು ಕೆಲವರು ಬಂಕರ್ ನಲ್ಲೇ ಇದ್ದಾರೆ ಎಂದು ಹೇಳಿದರು.
ಮಂಗಳೂರು ನಗರದ ಐದು ಕುಟುಂಬದ ಬಳಿ ತೆರಳಿ ಅವರಿಗೆ ವಿಶ್ವಾಸ ತುಂಬಿದ್ದೇವೆ. ನವೀನ್ ಎಂಬ ಯುವಕ ಬಾಂಬ್ ದಾಳಿಗೆ ಮೃತನಾಗಿರುವುದು ಬೇಸರದ ವಿಚಾರ. ಆ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ಕೊಡಲಿ.ಆದರೆ ಉಳಿದವರು ಭಯ ಪಡುವ ಅಗತ್ಯ ಇಲ್ಲ, ನಮ್ಮ ಸರ್ಕಾರ ನಿಮ್ಮ ಜೊತೆ ಇದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರು ಕೂಡ ನೋಡಲ್ ಆಫೀಸರ್ ನೇಮಿಸಿ ಕ್ರಮ ವಹಿಸಿದ್ದಾರೆ. ನಿನ್ನೆ ನವೀನ್ ಸಾವಿನ ಘಟನೆ ಬಳಿಕ ಸಿಎಂ ಉದಾಸಿ ದೆಹಲಿಗೆ ಹೋಗಿದ್ದಾರೆ. ನಾನು ತಕ್ಷಣ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿಗಳು ಹಾಗೂ ಸಚಿವ ಜೈಶಂಕರ್ ಅವರಿಗೆ ಮಾತನಾಡಿದ್ದೇವೆ. ನಾನು ಆ ಭಾಗದ ಮಂತ್ರಿ ಮತ್ತು ಶಾಸಕರಿಗೆ ತಕ್ಷಣ ಎಲ್ಲರ ಮನೆಗಳಿಗೆ ಹೋಗಲು ಹೇಳಿದ್ದೇನೆ. ಅವರ ಕುಟುಂಬದ ಜೊತೆ ನಿರಂತರ ಸಂಪರ್ಕ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ನೀಡಲಿ ಎಂದು ಹೇಳಿದರು.