ಆರ್ಯನ್ ಖಾನ್ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆಯ ಭಾಗವಾಗಿದ್ದರು ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ: ಎಸ್ ಐಟಿ

Prasthutha|

ಮುಂಬೈ: ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು SIT ಅಧಿಕಾರಿಗಳು ಹೇಳಿದ್ದಾರೆ.

- Advertisement -

ಕಾರ್ಡೆಲಿಯಾ ವಿಹಾರ ನೌಕೆಯ ಮೇಲಿನ ದಾಳಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ವಿಶೇಷ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ದ ತನಿಖಾ ತಂಡವು (SIT) ಪತ್ತೆಹಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

SIT ಯ ಅಧಿಕಾರಿಗಳು ಹೇಳುವಂತೆ, “ಆರ್ಯನ್ ಖಾನ್ ಅವರಲ್ಲಿ ಡ್ರಗ್ಸ್‌ ಇರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‌ ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಚಾಟ್‌ ಗಳು ಆರ್ಯನ್‌ ಅವರು ಯಾವುದೇ ಅಂತಾರಾಷ್ಟ್ರೀಯ ಸಿಂಡಿಕೇಟ್‌ ನ ಭಾಗವಾಗಿದ್ದರು ಎಂದು ಸೂಚಿಸುವುದಿಲ್ಲ” ಎಂದು ಹೇಳಿದ್ದಾರೆ.

- Advertisement -

ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ ನಲ್ಲಿ, ಕಾರ್ಡೆಲಿಯಾ ಕ್ರೂಸ್‌‌ ಹಡಗಿನ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ವಾಂಖೆಡೆ ಮತ್ತು ಅಧಿಕಾರಿಗಳು ದಾಳಿ ಮಾಡಿದ್ದರು.

Join Whatsapp