ಮುಂಬೈ: ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ `ಜಿಹಾದಿ ನಂಬರ್ ಒನ್’ ಎಂದು ಟ್ವೀಟ್ ಮಾಡಿದ್ದ ನರಸಿಂಗಾನಂದ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಲಾಂ ಪಾಕಿಸ್ತಾನಕ್ಕೆ ಅಣು ಬಾಂಬ್ ಗಳ ಸೂತ್ರವನ್ನು ಮಾರಾಟ ಮಾಡಿದ್ದಾರೆ. 2001ರ ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರುಗೆ ಕಲಾಂ ರಾಷ್ಟ್ರಪತಿ ಭವನದಲ್ಲಿ ವಿಶೇಷ ಸೆಲ್ ಏರ್ಪಾಟು ಮಾಡಿದ್ದರೆಂದೂ ನರಸಿಂಗಾನಂದ ಆರೋಪಿಸಿದ್ದರು.
ಎಪಿಜೆ ಅಬ್ದುಲ್ ಕಲಾಂ ಡಿಆರ್ ಡಿಒ ಮುಖ್ಯಸ್ಥರಾಗಿದ್ದ ವೇಳೆ ಹಲವಾರು ಹಿಂದು ವಿಜ್ಞಾನಿಗಳ ಹತ್ಯೆಯಾಗಿತ್ತು. ಆಲಿಘರ್ ಮುಸ್ಲಿಂ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ದಾರುಲ್ ಉಲೂಂ ದಿಯೋಬಂದ್ ಭಾರತವನ್ನು ಅಫ್ಘಾನಿಸ್ಥಾನವಾಗಿ ಪರಿವರ್ತಿಸುತ್ತಿದೆ ಎಂದು ಯತಿ ನರಸಿಂಗಾನಂದ ನಿಂದನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನರಸಿಂಗಾನಂದ ವಿರುದ್ಧ IPC 153 A, 153 B, 295 A, 505 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.