ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿದ ಪ್ರತಿಷ್ಠಿತ ಆಪಲ್ ಕಂಪೆನಿ

Prasthutha|

ಕ್ಯಾಲಿಫೋರ್ನಿಯಾ: ಪ್ರತಿಷ್ಟಿತ ಟೆಕ್ ದೈತ್ಯ ಆಯಪಲ್ ಕಂಪನಿಯು ರಷ್ಯಾದಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಉಕ್ರೇನ್ನ ಮೇಲೆ ರಷ್ಯಾದ ದಾಳಿಯ ಬಳಿಕ ರಷ್ಯಾಗೆ ಉಂಟಾದ ಬಹುದೊಡ್ಡ ನಷ್ಟಗಳಲ್ಲಿ ಇದೂ ಒಂದಾಗಿದೆ. ವಿವಿಧ ಸರ್ಕಾರಗಳು, ಕ್ರೀಡಾ ಸಂಸ್ಥೆಗಳು ಮಾತ್ರವಲ್ಲದೇ ದೊಡ್ಡ ದೊಡ್ಡ ಕಂಪನಿಗಳು ಕೂಡ ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಿವೆ.

- Advertisement -

ನಾವು ರಷ್ಯಾದಲ್ಲಿ ಎಲ್ಲಾ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದ್ದೇವೆ. ಕಳೆದ ವಾರದಿಂದ ನಾವು ನಮ್ಮ ಉತ್ಪನ್ನಗಳನ್ನು ರಷ್ಯಾಗೆ ರಫ್ತು ಮಾಡುವುದನ್ನೇ ನಿಲ್ಲಿಸಿದ್ದೇವೆ ಎಂದು ಆಯಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಅಲ್ಲದೇ ಆಯಪಲ್ ಪೇ ಹಾಗೂ ಇತರೆ ಸೇವೆಗಳನ್ನು ಸೀಮಿತಗೊಳಿಸಿದ್ದೇವೆ ಎಂದು ಐಫೋನ್ ತಯಾರಕ ಕಂಪನಿಯು ಹೇಳಿದೆ.

ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣಗಳ ಬಗ್ಗೆ ಅತಿಯಾದ ನಾವು ಕಳವಳವನ್ನು ಹೊಂದಿದ್ದೇವೆ. ರಷ್ಯಾದ ಹಿಂಸಾಚಾರದಿಂದಾಗಿ ನರಳುತ್ತಿರುವ ಎಲ್ಲಾ ಜನರೊಂದಿಗೆ ನಾವಿದ್ದೇವೆ ಎಂದು ಆಯಪಲ್ ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp