ಪಾಟ್ನಾ : ಬಿಹಾರದ ವೈಶಾಲಿ ಜಿಲ್ಲೆಯಲ್ಲಿ 20ರ ಹರೆಯದ ಯುವತಿಯ ಮೇಲೆ ಆಸಿಡ್ ದಾಳಿ ಮಾಡಿ, ಹತ್ಯೆಗೈದ ಘಟನೆ ವರದಿಯಾಗಿದೆ. ಮೃತ ಯುವತಿಯ ತಾಯಿ, ಮಗಳ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟಿಸಿದ ಬೆನ್ನಲ್ಲೇ, ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
#JusticeForGulnaz ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ದುಷ್ಕರ್ಮಿಗಳು ಮುಸ್ಲಿಂ ಯುವತಿಯನ್ನು ಜೀವಂತ ಸಹಿಸಿ, ಬಾವಿಯೊಂದಕ್ಕೆ ಎಸೆದಿದ್ದಾರೆ ಎನ್ನಲಾಗಿದೆ.
ಆಕೆಯ ಮೇಲೆ ನಡು ರಸ್ತೆಯಲ್ಲಿ ಸೀಮೆ ಎಣ್ಣೆ ಸುರಿದು ಜೀವಂತ ದಹಿಸಲಾಗಿದೆ. ಹುಡುಗನ ಹೆಸರು ಸತೀಶ್ ಕುಮಾರ್ ರಾಯ್ ಎಂದು ಮೃತ ಯುವತಿಯ ತಾಯಿ ಹೇಳಿರುವ ವೀಡಿಯೊ ಆನ್ ಲೈನ್ ನಲ್ಲಿ ಪೋಸ್ಟ್ ಆಗಿದೆ.
ಆರೋಪಿಗಳ ಬಗ್ಗೆ ಸಾಯುವುದಕ್ಕೂ ಮೊದಲು ಯುವತಿ ಹೆಸರು ಹೇಳಿದ್ದರೂ, ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ವರದಿಯೊಂದು ತಿಳಿಸಿದೆ. ಇನ್ನೋರ್ವ ಆರೋಪಿ ಹೆಸರು ಚಂದನ್ ಕುಮಾರ್ ರಾಯ್ ಎಂದು ಗುರುತಿಸಲಾಗಿದೆ.
ಯುವತಿಯ ಮದುವೆಗೆ ನಾಲ್ಕು ತಿಂಗಳಷ್ಟೇ ಬಾಕಿಯಿತ್ತು. ಹಲವು ಸಮಯದಿಂದ ಈ ಯುವಕರು ಯುವತಿಗೆ ಕಿರುಕುಳ ನೀಡುತ್ತಿದ್ದರು. ಅದಕ್ಕೆ ಯುವತಿ ಆಕ್ಷೇಪಿಸುತ್ತಿದ್ದಳು. ಘಟನೆ ನಡೆದು, ಎರಡು ವಾರ ಕಳೆದಿದ್ದರೂ, ಮುಖ್ಯವಾಹಿನಿ ಮಾಧ್ಯಮಗಳು ಘಟನೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡದಿರುವುದು ವಿಪರ್ಯಾಸ.