ಇವಿಎಂ ವಿರುದ್ಧ ಮತ್ತೆ ಬುಗಿಲೇಳಲಿದೆ ಆಕ್ರೋಶ | ನ.26ರಂದು ರಾಷ್ಟ್ರಮಟ್ಟದ ಆಂದೋಲನಕ್ಕೆ ಕರೆ

Prasthutha: November 17, 2020

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಇವಿಎಂ ದುರ್ಬಳಕೆಯ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಇನ್ನೊಂದೆಡೆ, ಸೋತವರು ಇವಿಎಂ ದೋಷವನ್ನು ನೆಪವಾಗಿಸುತ್ತಾರೆ ಎಂಬ ವ್ಯಂಗ್ಯವನ್ನು ಮೊದಲೇ ಹರಿಬಿಡಲಾಗಿತ್ತು. ಆದರೆ, ಇದೀಗ ಇವಿಎಂ ವಿರುದ್ಧ ರಾಷ್ಟ್ರೀಯ ಜನಹಿತ ಸಂಘರ್ಷ ಪಾರ್ಟಿ ಇವಿಎಂ ವಿರುದ್ಧ ಗಂಭೀರ ಹೋರಾಟ ರೂಪಿಸುವುದಾಗಿ ಘೋಷಿಸಿದೆ.

ನ.26ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಇವಿಎಂ ವಿರುದ್ಧ ಬೃಹತ್ ರಾಷ್ಟ್ರೀಯ ಆಂದೋಲನಕ್ಕೆ ಚಾಲನೆ ನೀಡುವುದಾಗಿ ಆರ್ ಜೆಎಸ್ ಪಿ ಘೋಷಿಸಿದೆ.

ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಆರ್ ಜೆಎಸ್ ಪಿ ಅಧ್ಯಕ್ಷ ಭಾನುಪ್ರತಾಪ್ ಸಿಂಹ, ಇವಿಎಂ ಹೋದರೆ, ಬಿಜೆಪಿ ಹೋಗುತ್ತದೆ. ಬಿಜೆಪಿ ಹೋದರೆ, ದೇಶ ಉಳಿಯುತ್ತದೆ ಎಂದಿದ್ದಾರೆ.

ಬಿಹಾರದಲ್ಲಿ ಎಲ್ಲಾ ಸಮುದಾಯ, ವರ್ಗಗಳ ಜನರು ಆರ್ ಜೆಡಿಗೆ ಮತ ಹಾಕಲು ನಿರ್ಧರಿಸಿದ್ದರು. ಆದರೆ ಫಲಿತಾಂಶ ವಿರುದ್ಧವಾಗಿ ಬಂದಿದೆ. ಫಲಿತಾಂಶದಲ್ಲಿ ಅಲ್ಪ ಅಂತರ ಕಾಯ್ದುಕೊಳ್ಳುವ ಮೂಲಕ ಇವಿಎಂ ಬಗ್ಗೆ ಸಂದೇಹ ಮೂಡದಂತೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಆರಂಭದಿಂದ ಕೊನೆ ವರೆಗೂ ಪ್ರಧಾನಿ ಸಭೆಗಳು ಸೇರಿದಂತೆ, ಬಿಜೆಪಿ ಸಭೆಗಳಲ್ಲಿ ಖುರ್ಚಿಗಳು ಖಾಲಿಯಿರುತ್ತಿದ್ದವು. ಆದರೂ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಹೇಗೆ ಗೆದ್ದಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇವಿಎಂ ಬಗ್ಗೆ ಸಂದೇಹ ಮೂಡದಿರಲು ಚುನಾವಣೆಗೂ ಮುನ್ನಾ ಧರ್ಮದ ಹೆಸರಲ್ಲಿ, ಬೇರೆ ಬೇರೆ ಭಾವನಾತ್ಮಕ ವಿಷಯಗಳಿಗೆ ಆದ್ಯತೆ ನೀಡಿ ಪ್ರಚಾರ ಮಾಡಲಾಗುತ್ತದೆ. ಚುನಾವಣೆ ಬಳಿಕ ಅದೇ ಕಾರಣಕ್ಕಾಗಿ ಬಿಜೆಪಿ ಚುನಾವಣೆ ಗೆದ್ದಿದೆ ಎಂದು ಬಿಂಬಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇವಿಎಂ ದೋಷಗಳ ಬಗ್ಗೆ ಕಾಂಗ್ರೆಸ್, ಆಪ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳಿಗೆ ಗೊತ್ತಿದೆ. ಆದರೂ, ತಾವೂ ಅದರ ಫಲಾನುಭವಿಗಳಾದ ಕಾರಣ, ಅದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಪ್ರತಿಪಕ್ಷಗಳೂ ಇದರಲ್ಲಿ ಒಳಗೊಳಗೇ ಕೈಜೋಡಿಸಿವೆ ಎಂದು ಇನ್ನೋರ್ವ ಮುಖಂಡರು ಆಪಾದಿಸಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳೂ ಜನರನ್ನು ತಪ್ಪು ಹಾದಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಆರೋಪಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!