‘ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು’ । ಬಿಹಾರ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ವಿವಾದಾತ್ಮಕ ಹೇಳಿಕೆ

Prasthutha|

ನವದೆಹಲಿ: ‘ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ’ ದಲ್ಲಿ ಉಳಿಯಲು ಬಯಸುವ ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕೆಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷನ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಆಡಳಿತಾರೂಢ ಬಿಜೆಪಿ ಶಾಸಕ ಹರಿಭೂಷನ್ ಠಾಕೂರ್, 1947 ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವನ್ನು ವ್ಯವಸ್ಥೆಗೊಳಿಸಲಾಗಿದೆ. ಇನ್ನು ಮುಂದಕ್ಕೆ ಅವರು ಭಾರತದಲ್ಲಿ ಉಳಿಯಲು ಎರಡನೇ ದರ್ಜೆಯ ನಾಗರಿಕರಾಗಿರಬೇಕು ಮತ್ತು ಅವರ ಚುನಾವಣಾ ಹಕ್ಕುಗಳನ್ನು ಕಸಿದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

‘ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿಸುವುದು ಐಸಿಸ್ ನ ಕಾರ್ಯಯೋಜನೆಯಾಗಿದೆ. ಅವರು ಮಾನವೀಯತೆ ವಿರೋಧಿಗಳು. ಅವರನ್ನು ಅಲ್ಪಸಂಖ್ಯಾತರೆಂದು ಕರೆಯುವುದು ಸಂವಿಧಾನಕ್ಕೆ ಮಾಡುವ ಅಪಹಾಸ್ಯ. ಅವರಿಗೆ ಈಗಾಗಲೇ ಪ್ರತ್ಯೇಕ ದೇಶದ ವ್ಯವಸ್ಥೆಗೊಳಿಸಲಾಗಿದೆ. ಅವರು ಜಗತನ್ನು ಇಸ್ಲಾಮಿಕ್ ರಾಷ್ಟ್ರಗಳಾಗಿ ಪರಿವರ್ತಿಸಲು ಕಾರ್ಯಯೋಜನೆಯೊಂದಿಗೆ ಮುನ್ನುಗ್ಗುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ತಿಳಿಸಿದ್ದಾರೆ.

- Advertisement -

ದೇಶದಲ್ಲಿ ಮುಸ್ಲಿಮರಿಗೆ ಅಲ್ಪ ಅಥವಾ ಯಾವುದೇ ಹಕ್ಕುಗಳಿಲ್ಲದೆ ಬದುಕಲು ಅವಕಾಶ ನೀಡಬೇಕೆಂದು ಪ್ರಚಾರ ಪಡಿಸುತ್ತಿರುವ ಆರೆಸ್ಸೆಸ್ ನ ಅಭಿಪ್ರಾಯಗಳನ್ನು ಬಿಜೆಪಿ ಶಾಸಕ ಹರಿಭೂಷನ್ ಠಾಕೂರ್ ಪುನರುಚ್ಚರಿಸುತ್ತಿರುವುದು ವೀಡಿಯೋದಲ್ಲಿ ಉಲ್ಲೇಖವಾಗಿದೆ.

ಈ ಹಿಂದೆ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾರ್ವಜನಿಕವಾಗಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.



Join Whatsapp