ಯುದ್ಧ ಘೋಷಿಸಿದ ಪುಟಿನ್; ಉಕ್ರೇನ್ ಗೆ ನುಗ್ಗಿದ ರಷ್ಯಾ ಸೇನೆ

Prasthutha|

ಮಾಸ್ಕೊ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ಘೋಷಿಸಿದ್ದು,ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಅವರು ಕರೆ ನೀಡಿದ್ದಾರೆ.

- Advertisement -

ತಾನು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದಾಗಿ  ದೂರದರ್ಶನದ ಮೂಲಕ ಘೋಷಣೆ ಮಾಡಿರುವ ರಷ್ಯಾದ ಅಧ್ಯಕ್ಷ,  ಕಾರ್ಯಾಚರಣೆಯ ಮಧ್ಯ ಪ್ರವೇಶಿಸುವವರ ವಿರುದ್ಧ ಪ್ರತೀಕಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪೂರ್ವ ಉಕ್ರೇನ್‌ ನ  ಯೋಧರು ಉಕ್ರೇನ್ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ರಷ್ಯಾದ ನೆರವು ಕೇಳಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಹೇಳಿಕೆಯ ಬೆನ್ನಲ್ಲೇ ಪುಟಿನ್ ಈ ಆದೇಶ ಹೊರಡಿಸಿದ್ದಾರೆ.

- Advertisement -

ಇದಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯನ್ನರನ್ನು ಉದ್ದೇಶಿಸಿ ‘ಯುರೋಪ್‌ನಲ್ಲಿನ ಪ್ರಮುಖ ಯುದ್ಧ’ ವನ್ನು ಬೆಂಬಲಿಸದಂತೆ ತಡರಾತ್ರಿ ಭಾವನಾತ್ಮಕ ಮನವಿ ಮಾಡಿದ್ದಾರೆ.

ರಷ್ಯನ್ ಭಾಷೆಯಲ್ಲಿ ಮಾತನಾಡಿದ ಝೆಲೆನ್ಸ್ಕಿ ‘ಉಕ್ರೇನ್ ಬಗ್ಗೆ ರಷ್ಯಾದ ಜನರಿಗೆ ಸುಳ್ಳು ಹೇಳಲಾಗುತ್ತಿದೆ ಮತ್ತು ಯುದ್ಧದ ಸಾಧ್ಯತೆಯು ‘ನಿಮ್ಮ ಮೇಲೆ ಅವಲಂಬಿತವಾಗಿದೆ’ಎಂದು ಹೇಳಿದರು.



Join Whatsapp