ಅಂಬೇಡ್ಕರ್ ಪುಸ್ತಕ ಹಿಡಿದು ಜೈಲು ಪ್ರವೇಶಿಸಿದ ಚೇತನ್ !

Prasthutha|

ಬೆಂಗಳೂರು: ಅಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ಇಲ್ಲಿನ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದು, 8ನೇ ಎಸಿಎಂಎಂ ಕೋರ್ಟ್‌ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

- Advertisement -

ತಡರಾತ್ರಿ ಚೇತನ್ ಅವರನ್ನು ವೈಯಾಲಿಕಾವಲ್ ಪೋಲಿಸ್ ಠಾಣೆಯಿಂದ ಶೇಷಾದ್ರಿ ಪುರಂ ಪೊಲೀಸರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಹಿರಿಯ ವಕೀಲರಾದ ಬಾಲನ್ ಅವರು ವಾದ ಮಂಡಿಸಿದರು.ಆ ನಂತರ, 8ನೇ ಎಸಿಎಂಎಂ ಕೋರ್ಟ್‌ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಇದಾದ ಬಳಿಕ ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದರು. ನಂತರ ಅವರು ಜೈಲಿನಲ್ಲಿ ಇದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ “Annihilation of cast” ಪುಸ್ತಕವನ್ನು ಪ್ರದರ್ಶಿಸಿದರು.



Join Whatsapp