ಸಮುದ್ರ ಮಧ್ಯದಲ್ಲಿ ಹೊತ್ತಿ ಉರಿದ ಹೊಚ್ಚ ಹೊಸ 4,000 ಐಷಾರಾಮಿ ಕಾರುಗಳು !

Prasthutha|

ಪೋರ್ಚುಗಲ್; ಜರ್ಮನಿಯಿಂದ ಅಮೆರಿಕಾ ದೇಶಕ್ಕೆ 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಕಾರ್ಗೋ ಹಡಗೊಂದು ಅಟ್ಲಾಂಟಿಕ್ ಮಹಾಸಾಗರದಲ್ಲಿ ಬೆಂಕಿಗೆ ಆಹುತಿಯಾಗಿದೆ.
‘ಫೆಲಿಸಿಟಿ ಏಸ್’ ಹೆಸರಿನ ಪನಾಮಾ ದೇಶದ ಧ್ವಜವನ್ನು ಹೊಂದಿದ್ದ 650 ಅಡಿ ಉದ್ದದ ಕಾರ್ಗೋ ಹಡಗು, ಪೋರ್ಚುಗಲ್’ ಅಜೋರ್ಸ್ ಕರಾವಳಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಪೋರ್ಚುಗೀಸ್ ಸೇನೆಯು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.
ಕಾರುಗಳನ್ನು ಜೋಡಿಸಿಡಲಾಗಿದ್ದ ಹಡಗಿನ‌ ಮೇಲಂತಸ್ತಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ.

- Advertisement -


ಮೂಲಗಳ ಪ್ರಕಾರ ಫೋಕ್ಸ್ ವ್ಯಾಗನ್ ಕಂಪನಿಯ 1,100 ಪೋರ್ಷೆ, 189 ಬೆಂಟ್ಲಿ ಸೇರಿದಂತೆ ಆಡಿ, ಲಂಬೋರ್ಗಿನಿ, ಬುಗಾಟಿ ಕಾರುಗಳು ಬೆಂಕಿಗೆ ಆಹುತಿಯಾಗಿದೆ.
ಕೋವಿಡ್ ಪರಿಣಾಮ ಹಾಗೂ ಕಂಪ್ಯೂಟರ್ ಚಿಪ್ ಕೊರತೆಯಿಂದಾಗಿ ಆಟೋಮೊಬೈಲ್ ಕ್ಷೇತ್ರವು ಜಾಗತಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲೇ ಫೋಕ್ಸ್‌ ವ್ಯಾಗನ್‌ ಕಂಪನಿಯ 4000 ಕಾರುಗಳು ಬೆಂಕಿಗೆ ಆಹುತಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ



Join Whatsapp