ಇದುವರೆಗೆ ವಸೂಲಿ ಮಾಡಿರುವ ಎಲ್ಲ ಮೊತ್ತವನ್ನು ಹಿಂದಿರುಗಿಸಲು ಸುಪ್ರೀಂ ಆದೇಶ
ಅಹ್ಮದಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ವಿರೋಧಿಸಿ ಪ್ರತಿಭಟಿಸುವವರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ದಂಡ ವಸೂಲಿಗೆ ಪ್ರತಿಭಟನಕಾರರಿಗೆ ನೀಡಿದ್ದ ನೋಟಿಸ್ ಅನ್ನು ಸುಪ್ರೀಂಕೋರ್ಟ್ ತರಾಟೆಯ ಬಳಿಕ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಹಿಂಪಡೆದಿದೆ.
ಹಾನಿ ವಸೂಲಿಗೆ ಉತ್ತರ ಪ್ರದೇಶ ಸರಕಾರವು ಹಲವು ಮಸ್ಲಿಮರಿಗೆ ನೋಟೀಸು ನೀಡಿತ್ತು. ಕೂಡಲೆ ಸರಿಪಡಿಸಿ ಇಲ್ಲವೇ ಕಿತ್ತೆಸೆಯುತ್ತೇವೆ ಎಂದು ಇತ್ತೀಚೆಗೆ ಸುಪ್ರಿಂ ಕೋರ್ಟ್ ಇತ್ತೀಚೆಗೆ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಈ ವಿಷಯವನ್ನು ಕೂಡಲೇ ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರು ಸುಪ್ರೀಂ ಕೋರ್ಟಿನ ಜಸ್ಟಿಸ್ ಗಳಾದ ಡಿ. ವೈ. ಚಂದ್ರಚೂಡ್, ಸೂರ್ಯಕಾಂತ್ ಅವರಿದ್ದ ಪೀಠಕ್ಕೆ ಅರಿಕೆ ಮಾಡಿದ್ದಾರೆ.
ಕೂಡಲೆ ಸುಪ್ರೀಂ ಕೋರ್ಟು ಪೀಠವು ಇಲ್ಲಿಯವರೆಗೆ ವಸೂಲಿ ಮಾಡಿರುವ ಎಲ್ಲ ಮೊತ್ತವನ್ನು ಹಿಂದಿರುಗಿಸುವಂತೆ ಆದೇಶ ಮಾಡಿತು.
ಫೆಬ್ರವರಿ 11ರಂದು ಹೆಚ್ಚುವರಿ ಮ್ಯಾಜಿಸ್ಟ್ರೇಟರೇ ಕಾಯ್ದೆ ಮಾಡುವುದು, ನಷ್ಟ ಅಂದಾಜು ಮಾಡುವುದು, ಅವರೇ ವಸೂಲು ಮಾಡುವುದು ಏನಿದು ಎಂದು ಉತ್ತರ ಪ್ರದೇಶ ಸರಕಾರದ ಕಿವಿ ಹಿಂಡಿತ್ತು.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸಿದವರ ಮೇಲೆ ಬಿಜೆಪಿ ಸರಕಾರವು ಉತ್ತರ ಪ್ರದೇಶ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ವಸೂಲಿ ಕಾಯ್ದೆ 2020ನ್ನು ಪ್ರಯೋಗಿಸಿತ್ತು.