ಶಿರವಸ್ತ್ರ ಧರಿಸಲಿ ಅಥವಾ ಧರಿಸದಿರಲಿ; ಶಾಲೆಯ ಬಾಗಿಲಿಗೆ ಬರುವ ವಿದ್ಯಾರ್ಥಿಗಳನ್ನು ಅವಮಾನಿಸುವುದನ್ನು ನಿಲ್ಲಿಸಿ: ಒಲಿಂಪಿಯನ್ ಜ್ವಾಲಾ ಗುಟ್ಟಾ

Prasthutha|

ಹೊಸದಿಲ್ಲಿ: ಶಿರವಸ್ತ್ರ ಧರಿಸಿದ ಹೆಣ್ಮಕ್ಕಳನ್ನು ಬಹಿಷ್ಕರಿಸಿ ಕರ್ನಾಟಕದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಅಧಿಕಾರಿಗಳು ಕೈಗೊಂಡ ಕ್ರಮ ಮತ್ತು ಅದರ ವಿರುದ್ಧದ ಪ್ರತಿಭಟನೆಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಭಾರತೀಯ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

- Advertisement -

ಶಾಲೆಗಳು ಮಕ್ಕಳಿಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕಾದ ಸ್ಥಳಗಳಾಗಿದ್ದು, ಅದರ ಬಾಗಿಲಿಗೆ ಬರುವ ವಿದ್ಯಾರ್ಥಿಗಳನ್ನು ಅವಮಾನಿಸುವುದನ್ನು ನಿಲ್ಲಿಸಬೇಕು.ವಿದ್ಯಾರ್ಥಿಗಳು ರಾಜಕೀಯದ ಬಲಿಪಶುಗಳಾಗಬಾರದು ಎಂದು ಜ್ವಾಲಾ ಗುಟ್ಟಾ ಹೇಳಿದರು.

ತಮ್ಮನ್ನು ತಾವು ಬಲಪಡಿಸಲು ಶಾಲೆಯ ಬಾಗಿಲಿಗೆ ಬರುವ ಹೆಣ್ಮಕ್ಕಳನ್ನು ಅವಮಾನಿಸುವುದನ್ನು ನಿಲ್ಲಿಸಿ. ಶಾಲೆಗಳು ಹೆಣ್ಮಕ್ಕಳ ಸುರಕ್ಷತೆಯ ಕೇಂದ್ರಗಳಾಗಬೇಕಾದ ಸ್ಥಳಗಳಾಗಿವೆ ಎಂದು ಅವರು ಹೇಳಿದರು.



Join Whatsapp