ಬೆಳಗಾವಿ: ಹಿಜಾಬ್–ಕೇಸರಿಶಾಲು ವಿವಾದ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಬೆಳಗಾವಿಯ ವೀರಭದ್ರ ನಗರದಲ್ಲಿ ಮುಸ್ಲಿಮರಂತೆ ವೇಷಭೂಷಣ ಧರಿಸಿ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಆರು ಮಂದಿ ಹಿಂದೂ ಧರ್ಮೀಯರನ್ನು ಮಾರ್ಕೆಟ್ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಮೂವರು ವಯಸ್ಕರರಿದ್ದು, ಇನ್ನುಳಿದ ಮೂವರು ಅಪ್ರಾಪ್ತರಾಗಿದ್ದಾರೆ.
ಭಿಕ್ಷೆ ಬೇಡುವ ನೆಪದಲ್ಲಿ ಮನೆ–ಮನೆಗೆ ಭೇಟಿ ನೀಡುತ್ತಿದ್ದ ಅವರ ಸಂಶಯಾಸ್ಪದ ನಡೆ ಗಮನಿಸಿ ಸ್ಥಳೀಯರು ವಿಚಾರಿಸಿದಾಗ ಅವರು ವೇಷ ಮರೆಸಿಕೊಂಡಿರುವುದು ಗೊತ್ತಾಗಿದೆ
‘ಅವರು ಬೀದರ್ ಜಿಲ್ಲೆಯ ಹುಮನಾಬಾದ್ನವರು ಎಂದು ತಿಳಿಸಿದ್ದಾರೆ. ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದುದ್ದರಿಂದ ಸ್ಥಳೀಯರು ಮಾಹಿತಿ ನೀಡಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ತಪ್ಪಿತಸ್ಥರಾಗಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮಾರ್ಕೆಟ್ ಠಾಣೆ ಸಿಪಿಐ ಎಂ.ಎಸ್. ತುಳಸಿಗೇರಿ ಹೇಳಿದ್ದಾರೆ.