ಮದುವೆ ಸಮಾರಂಭದಲ್ಲಿ ಮಹಾ ದುರಂತ: ಬಾವಿಗೆ ಬಿದ್ದು 13 ಮಹಿಳೆಯರು ಸಾವು!

Prasthutha|

- Advertisement -

ಖುಷಿನಗರ: ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಬಾವಿಗೆ ಬಿದ್ದು ಸುಮಾರು 13 ಮಂದಿ ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಲ್ಲಿನ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮದುವೆ ನಡೆಯುತ್ತಿದ್ದ ಈ ಸ್ಥಳದಲ್ಲಿ ಒಂದು ದೊಡ್ಡದಾದ ಬಾವಿಯಿದ್ದು, ಅದರ ಮೇಲಿಂದ ಸ್ಲ್ಯಾಬ್​ ಹಾಕಿ, ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭ ಇದ್ದುದರಿಂದ ಅನೇಕರು ಬಂದು ಅಲ್ಲಿಯೇ ಕುಳಿತಿದ್ದರು. ಬಾವಿಯ ಮೇಲಿನ ಸ್ಲ್ಯಾಬ್​​​ ಗೆ ಭಾರ ಹೆಚ್ಚಿ, ಅದು ಮುರಿದುಬಿದ್ದಿದೆ. ಆಗ ಅದರ ಮೇಲೆ ಕುಳಿತಿದ್ದ ಮಹಿಳೆಯರೆಲ್ಲ ಬಾವಿಗೆ ಬಿದ್ದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕುಶಿನಗರ ಜಿಲ್ಲಾಧಿಕಾರಿ ಎಸ್​.ರಾಜಲಿಂಗಮ್​ ತಿಳಿಸಿದ್ದಾರೆ.

Join Whatsapp