IPL-2022 ಮೆಗಾ ಹರಾಜಿನಲ್ಲಿ ಮೆಗಾ ಎಡವಟ್ಟು !? ಮುಂಬೈ ಬಿಡ್ ಮಾಡಿದ್ದ ಖಲೀಲ್ ಅಹ್ಮದ್ ಡೆಲ್ಲಿ ಪಾಲು ! ವೀಡಿಯೋ ವೈರಲ್ !

Prasthutha|

ಬೆಂಗಳೂರು: ಐಪಿಎಲ್ 15ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಆಯ್ಕೆಗಾಗಿ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಎಡವಟ್ಟು ನಡೆದಿರುವುದಾಗಿ ಪ್ರಮುಖ ಕ್ರೀಡಾ ವೆಬ್ಸೈಟ್ ಕ್ರಿಕ್’ಟ್ರ್ಯಾಕರ್‌‌.ಕಾಮ್ ವರದಿ ಮಾಡಿದೆ.

- Advertisement -


ಭಾರತೀಯ ಎಡಗೈ ವೇಗಿ ಖಲೀಲ್ ಅಹ್ಮದ್’ಗಾಗಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಬಿರುಸಿನ ಬಿಡ್ಡಿಂಗ್ ನಡೆದಿತ್ತು. ಈ ವೇಳೆ ಮುಂಬೈ ಇಂಡಿಯನ್ಸ್ ಖಲೀಲ್’ಗಾಗಿ 5.25 ಕೋಟಿ ರೂಪಾಯಿ ಮೊತ್ತವನ್ನು ಬಿಡ್ ಮಾಡಿತ್ತು. ಬಳಿಕ ಡೆಲ್ಲಿ ಥಿಂಕ್ ಟ್ಯಾಂಕ್’ನಲ್ಲಿದ್ದ ಡೆಲ್ಲಿ ಫ್ರಾಂಚೈಸಿಯ ಸಹ ಮಾಲೀಕರಾದ ಕಿರಣ್ ಕುಮಾರ್ ಗ್ರಂಧಿ 5.50 ಕೋಟಿ ಬಿಡ್ ಮಾಡಿದ್ದರು. ಆದರೆ ಇದನ್ನು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದ ಚಾರು ಶರ್ಮಾ ಗಮನಿಸಿರಲಿಲ್ಲ. ಇಷ್ಟೇ ಅಲ್ಲ, ಖಲೀಲ್’ಗಾಗಿ 5.25 ಕೋಟಿ ಮೊತ್ತವನ್ನು ಮುಂಬೈ ಫ್ರಾಂಚೈಸಿ ಬಿಡ್ ಮಾಡಿದ್ದರೂ, ಅದೇ ಮೊತ್ತಕ್ಕೆ ಖಲೀಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ ಎಂದು ಚಾರು ಶರ್ಮಾ ಘೋಷಿಸಿದರು. ಈ ವೇಳೆ ಮುಂಬೈ ಥಿಂಕ್ ಟ್ಯಾಂಕ್’ನಲ್ಲಿದ್ದ ಓರ್ವ ಸದಸ್ಯ ‘ಏನಾಗುತ್ತಿದೆ’ ಎಂಬ ಅರ್ಥದಲ್ಲಿ ಕೈ ಸನ್ನೆ ಮಾಡಿದ್ದಾರೆ. ಆದರೆ ಮುಂಬೈ’ನ‌ ಉಳಿದ ಸದಸ್ಯರಾಗಲಿ, ಅಥವಾ ಇತರ ಫ್ರಾಂಚೈಸಿಗಳಾಗಲಿ ಈ ಕುರಿತು ಗಮನ ಹರಿಸಿರಲಿಲ್ಲ.
ಆದರೆ ಈ ಬಗ್ಗೆ ವೀಡಿಯೋ ಸಮೇತ ಕ್ರಿಕ್’ಟ್ರ್ಯಾಕರ್ ವರದಿ ‌ಮಾಡಿದೆ.
ಅಶೋಕ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಖಲೀಲ್ ಅಹ್ಮದ್ ಅವರ ಹರಾಜು ಪ್ರಕ್ರಿಯೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಅಚ್ಚರಿಯೆಂದರೆ ಈ ವೀಡಿಯೋದ ಕೆಳಗೆ ಕಾಮೆಂಟ್ ಮಾಡಿರುವ ಹಲವು ಮಂದಿ, ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚಾರು ಶರ್ಮಾ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ ಎಂದು ಕ್ರಿಕೆಟಿಗರ ಹೆಸರು ಉಲ್ಲೇಖಿಸಿ ಬರೆದಿದ್ದಾರೆ.



Join Whatsapp