ಕಾಂಗ್ರೆಸ್ ತ್ಯಜಿಸಿದ ಹಿರಿಯ ನಾಯಕ ಅಶ್ವಿನಿ ಕುಮಾರ್

Prasthutha|

ನವದೆಹಲಿ: ಮಾಜಿ ಕೇಂದ್ರ ಮಂತ್ರಿ ಅಶ್ವಿನಿ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಬದಲಿ ಆಡಳಿತದ ಮಾತಾಡುತ್ತಿದೆಯೇ ಹೊರತು ಅದಕ್ಕೆ ತಕ್ಕ ಪಾರದರ್ಶಕ ನಾಯಕತ್ವ ನೀಡಿಲ್ಲ, ಹಾಗೂ ರಾಷ್ಟ್ರ ಮಟ್ಟದಲ್ಲಿ ಬದಲಿಯಾಗಿ ನಿಲ್ಲುವ ವಾತಾವರಣವನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ ಎಂದು ಪಕ್ಷ ತ್ಯಜಿಸಿದ ಅಶ್ವಿನಿ ಕುಮಾರ್ ಹೇಳಿದರು.

ಸೋನಿಯಾ ಗಾಂಧಿಯವರ ಆಲೋಚನೆಯ ಮಟ್ಟಕ್ಕೆ ಪಕ್ಷದಲ್ಲಿ ಏನೂ ನಡೆಯುತ್ತಿಲ್ಲ. ನನಗೂ ಅದು ಸಾಧ್ಯವಾಗುತ್ತಿಲ್ಲ ಎಂದು ನೋವಿನಿಂದಲೇ ಪಕ್ಷ ಬಿಡುತ್ತಿದ್ದೇನೆ. ಕಾಂಗ್ರೆಸ್ ಪಡೆಯುತ್ತಿರುವ ಮತ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ. ನಾನು ಪಂಜಾಬಿನಲ್ಲಿ ಎಎಪಿ ಪರ ನಿಂತಿಲ್ಲ. ಅಲ್ಲಿ ರಾಷ್ಟ್ರ ಸೂಚಕ ಫಲಿತಾಂಶ ಬರುವುದಂತೂ ಖಚಿತ. ಸದ್ಯ ನಾನು ಯಾವ ಪಕ್ಷಕ್ಕೂ ಸೇರುತ್ತಿಲ್ಲ. ಮುಂದೆ ಹೇಳಲಾಗದು ಎಂದರು ಅಶ್ವಿನಿ ಕುಮಾರ್.



Join Whatsapp