ಬೆಂಗಳೂರು: ಮುಸ್ಲಿಮರ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ತಕ್ಷಣ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಡಿವೈಎಸ್ ಪಿ ರಂಗಸ್ವಾಮಿ ಸಿ.ಜೆ. ಅವರು ಮುಸ್ಲಿಮರ ವಿರುದ್ಧ ಅಪಮಾನಕರ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.
ಒಬ್ಬನಿಗೆ ನಾಲ್ಕು ಪತ್ನಿಯರು, 28 ಮಕ್ಕಳು, 5 ಕೆಜಿ X 33: ಒಂದೇ ಮನೆಗೆ 165 ಕೆಜಿ ಉಚಿತ ಪಡಿತರ ಅಕ್ಕಿ. ಹಿಂಗಾದರೆ ಬಹುಬೇಗ ಅವರ ಮುಲ್ಲಾ ಹೇಳಿದ ಹಾಗೆ 2050ರ ವೇಳೆಗೆ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರು ಮತ್ತು ಉಳಿದವರು ಅಲ್ಪಸಂಖ್ಯಾತರು ಆಗುವುದರಲ್ಲಿ ಸಂದೇಹವಿಲ್ಲ ಎಂದು ರಂಗಸ್ವಾಮಿ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಅದು ವಿವಾದವಾಗುತ್ತಿದ್ದಂತೆ ಅದನ್ನು ಅಳಿಸಿಹಾಕಿದ್ದಾರೆ.
ಡಿವೈಎಸ್ ಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಹಲವು ನೆಟ್ಟಿಗರು ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ಒತ್ತಾಯಿಸಿದ್ದಾರೆ.