ಸಾರ್ವಜನಿಕವಾಗಿಯೇ ಬುರ್ಖಾ, ಹಿಜಾಬ್ ತೆಗೆಸಿದ ಶಾಲಾ ಸಿಬ್ಬಂದಿ ವಿರುದ್ಧ ವ್ಯಾಪಕ ಆಕ್ರೋಶ

Prasthutha|

ಬೆಂಗಳೂರು: ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದ ಮುಸ್ಲಿಮ್ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರನ್ನು ಶಾಲೆಯ ಗೇಟ್ ಬಳಿಯೇ ತಡೆದು ಬುರ್ಖಾವನ್ನು ಸಾರ್ವಜನಿಕವಾಗಿಯೇ ತೆಗೆಯುವಂತೆ ಮಾಡಿದ ಶಾಲಾ ಸಿಬ್ಬಂದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಹಲವು ಮಹಿಳಾ ಹೋರಾಟಗಾರರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ನಾಯಕರು ಶಾಲೆಯ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಈ ಕೃತ್ಯವನ್ನು ಖಂಡಿಸಿದ್ದಾರೆ.

ನಟಿ ಸ್ವರಭಾಸ್ಕರ್, ಪತ್ರಕರ್ತರಾದ ತಬೂ ತೌಫೀಕ್, ವಕೀಲ ಆರ್.ಸಯೀದ್ ಮುಂತಾದವರು ಟ್ವೀಟ್ ಮಾಡಿ ಮಹಿಳೆಯರನ್ನು ಸಾರ್ವಜನಿಕವಾಗಿಯೇ ಬುರ್ಖಾ ತೆಗೆಸಿದ ಕೃತ್ಯವನ್ನು ಖಂಡಿಸಿದ್ದಾರೆ. ಮಾಧ್ಯಮದವರು ಕೂಡ ಬುರ್ಖಾ ತೆಗೆಯುತ್ತಿದ್ದುದನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದಾರೆ. ಇದು ಕೂಡ ಕಾನೂನು ಬಾಹಿರ ಕೃತ್ಯ ಎಂದು ಅವರು ತಿಳಿಸಿದ್ದಾರೆ.

- Advertisement -

ಕ್ಯಾಮರಾ ಎದುರೇ ಬುರ್ಖಾ ತೆಗೆಸಿದ ಕೃತ್ಯ ಖಂಡನೀಯ ಎಂದು ಹಲವು ಮಹಿಳಾ ಹೋರಾಟಗಾರರು ಟ್ವೀಟ್ ಮಾಡಿದ್ದಾರೆ.

ಹೈಕೋರ್ಟ್ ತೀರ್ಪಿನ ಹೆಸರಿನಲ್ಲಿ ಹೀಗೆ ಒಂದು ಸಮುದಾಯದ ಮಹಿಳೆಯರನ್ನು ಬಹಿರಂಗವಾಗಿ ಅವಮಾನಗೊಳಿಸಿರುವುದು ಸಹಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.



Join Whatsapp