ತೊಕ್ಕೊಟ್ಟು: ಮಂಗಳೂರು ಹೊರವಲಯದ ಕಲ್ಲಾಪುವಿನಲ್ಲಿ ಆಟೋ ಚಾಲಕರೊಬ್ಬರ ಮನೆಯನ್ನು ದುಷ್ಕರ್ಮಿಗಳ ತಂಡವೊಂದು ಧ್ವಂಸ ಮಾಡಿರುವ ಘಟನೆ ನಡೆದಿದೆ.
ಕಳೆದ ಎರಡು ತಿಂಗಳಿನಿಂದ ಮನೆಯಲ್ಲಿ ಯಾರೂ ವಾಸವಿಲ್ಲದೆ ಇರುವುದನ್ನು ಅರಿತ ದುಷ್ಕರ್ಮಿಗಳು ಆಟೋ ಚಾಲಕ ಇಬ್ರಾಹಿಂ ಖಲೀಲ್ ಎಂಬವರ ಮನೆಯ ಹಿಂಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಮದ್ಯಪಾನ, ಗಾಂಜಾ ಸೇವನೆಗೈದು ದಾಂಧಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣ, ಮೇಲ್ಛಾವಣಿ ಪುಡಿಗೈದು ಅಪಾರ ಹಾನಿ ಮಾಡಿದ್ದಾರೆ.
ಈ ಸಂಬಂಧ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.