ಮಡಿಕೇರಿ: ಕೊಡಗಿನ ಮೂಲ ಜನಾಂಗವಾದ ಕುಡಿಯ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ, ನೃತ್ಯ, ಪರಂಪರೆಯೂ ಕಕ್ಕಬೆಯ ಯುವಕಪಾಡಿಯ ಕುಡಿಯಡಮಂದ್ ನಲ್ಲಿ ಮೇಳೈಸಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಾಲ್ನಾಡ್ ಕುಡಿಯಡ ಮಂದ್ ನಮ್ಮೆ ಸಮಿತಿಯ ಸಹಯೋಗದಲ್ಲಿ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಕುಡಿಯಡ ಮಂದ್ ನಮ್ಮೆ-2022 ನಡೆಯಿತು. ಹಿರಿಯ ಜನಪದ ಕಲಾವಿದ ಪಡಿಯ ಮಲೆ ಗಣೇಶ್ ಬಿದ್ದಪ್ಪ ದುಡಿಕೊಟ್ಟುವ ಮೂಲಕ ಮಂದ್ ತೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ನೃತ್ಯ ಮಡುವ ಮೂಲಕ ಜನಾಂಗದ ಗಮನ ಸೆಳೆದರು.