ಶಿರವಸ್ತ್ರ ನಿಷೇಧದ ವಿರುದ್ಧದ ಅರ್ಜಿ ವಿಚಾರಣೆ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಣೆ

Prasthutha|

ನವದೆಹಲಿ: ಕರ್ನಾಟಕದಲ್ಲಿ ಉದ್ಭವಿಸಿರುವ ಶಿರವಸ್ತ್ರ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನ 9 ಮಂದಿ ನ್ಯಾಯಮೂರ್ತಿಗಳ ನೇತೃತ್ವದ ಪೀಠ ವಿಚಾರಣೆ ನಡೆಸಬೇಕು ಎಂದು ಕೋರಿ ಹಿರಿಯ ವಕೀಲ ಕಪಿಲ್ ಸಿಬಲ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ನಿರಾಕರಿಸಿದ್ದಾರೆ.

- Advertisement -

ಈಗಾಗಲೇ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈಗಲೇ ನಾವು ಮಧ್ಯ ಪ್ರವೇಶಿಸಿರುವುದು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಆಗ ಕಪಿಲ್ ಸಿಬಲ್ ಅವರು, ಹಾಗಾದರೆ ಅರ್ಜಿಯನ್ನು ಲಿಸ್ಟ್ ಮಾಡಲು ಸೂಚಿಸಿ ಎಂದು ಮನವು ಮಾಡಿದರು.

- Advertisement -

ಒಂದು ವೇಳೆ ನಾವು ಅರ್ಜಿಯನ್ನು ವಿಚಾರಣೆಯ ಲಿಸ್ಟ್ ಗೆ ಸೇರಿಸಿದರೆ ಕರ್ನಾಟಕ  ಹೈಕೋರ್ಟ್ ನವರು ವಿಚಾರಣೆ ನಡೆಸುವುದಿಲ್ಲ. ಹಾಗಾಗಿ ಈಗ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್, ಜೆ.ಎಂ.ಖಾಝಿ ನೇತೃತ್ವದ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಹಿಜಾಬ್ ನಿಷೇಧದ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಮೊದಲು ಕೃಷ್ಣ ದೀಕ್ಷಿತ್ ನೇತೃತ್ವದ ಏಕ ಸದಸ್ಯ ಪೀಠ ಎರಡು ದಿನಗಳ ಕಾಲ ಅರ್ಜಿಯ ವಿಚಾರಣೆ ನಡೆಸಿ ನಿನ್ನೆ ಸಂಜೆ ಪ್ರಕರಣದ ವಿಚಾರಣೆ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು.

Join Whatsapp