ಕುಶಾಲನಗರ: ಹಾಸ್ಟೆಲ್ ಗೆ ನುಗ್ಗಿ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ RSS ಕಾರ್ಯಕರ್ತರು

Prasthutha|

- Advertisement -

ಕುಶಾಲನಗರ: RSS ಕಾರ್ಯಕರ್ತರು ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಶಾಲನಗರದ RSS ಕಾರ್ಯಕರ್ತರಾದ ಲಕ್ಷ್ಮಿ ನಾರಾಯಣ್, ಸಂದೀಪ್, ನವನೀತ್ ಪೊನ್ನಟ್ಟಿ, ಮಧು, ಅನಂತ ನಾರಾಯಣ, ಗಣಪತಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

- Advertisement -

ಪೊಲೀಸರು, ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರು  ಆರು ಮಂದಿಯನ್ನು ಬಂಧಿಸಿದ್ದು, ಉಳಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಲ್ಲೆ‌ ನಡೆಸಿದ ವೀಡಿಯೋ ದೃಷ್ಯಾವಳಿಯನ್ನು ಪೊಲೀಸರು ಪಡೆದುಕೊಂಡಿದ್ದು, ಸ್ಥಳಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವಿವರ: ಕುಶಾಲನಗರದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನ ಅಂಥೋಣಿ ಎಂಬ ವಿದ್ಯಾರ್ಥಿಯು ಮಂಗಳವಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ. ಇದನ್ನು ವಿದ್ಯಾರ್ಥಿಯೋರ್ವಳು ಪ್ರಶ್ನಿಸಿದ್ದಾಳೆ. ಈ ವಿಚಾರವನ್ನು ಅಂಥೋಣಿ, ವಿದ್ಯಾರ್ಥಿನಿಯ ಹೆಸರನ್ನು ಬಹಿರಂಗಪಡಿಸಿ ಆಕೆಯ ವಿರುದ್ಧ ವೀಡಿಯೋ ವೈರಲ್ ಮಾಡಿದ್ದ. ವೀಡಿಯೋ ವೈರಲ್ ಆದುದನ್ನು ವಿದ್ಯಾರ್ಥಿ ರಾಝಿಕ್ ಪ್ರಶ್ನಿಸಿದಾಗ, ರಾಝಿಕ್ ಹಾಗೂ ಅಂಥೋಣಿ ನಡುವೆ ಗಲಾಟೆಯಾಗಿದೆ. ಈ ವಿಚಾರವನ್ನು ತಿಳಿದ ಕುಶಾಲನಗರದ ಮೂವತ್ತಕ್ಕೂ ಹೆಚ್ಚು ಆರ್.ಎಸ್.ಎಸ್ ಕಾರ್ಯಕರ್ತರು ರಾಜಿಕ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ‌ನಡೆಸಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಮಾಹಿತಿ‌ ನೀಡಿದ್ದಾರೆ.

ನನ್ನ ಹಾಗೂ ಅಂತೋಣಿ ನಡುವೆ ನಡೆದ ಸಣ್ಣ ಗಲಾಟೆಗೆ ಸುಮಾರು 30ಕ್ಕೂ ಹೆಚ್ಚು ಆರ್.ಎಸ್.ಎಸ್ ಕಾರ್ಯಕರ್ತರು ಹಾಸ್ಟೆಲ್ ಗೆ ನುಗ್ಗಿ ನನ್ನ ಮೇಲೆ ಹಲ್ಲೆ‌ ನಡೆಸಿದರು. ನಂತರ ಕಾರಿನಲ್ಲಿ ಕೂರಿಸಿ ಬೆದರಿಸಿದರು. ಬಳಿಕ ಇಬ್ಬರು ಪೊಲೀಸರು ಕಾರಿಗೆ ಹತ್ತಿದರು. ಸ್ವಲ್ಪ ಸಮಯದ ನಂತರ ಅವರು‌ ನನ್ನನ್ನು ಠಾಣೆಗೆ ಕರೆತಂದರು. ಅಲ್ಲಿನ ನಾಲ್ವರು ಪೊಲೀಸರು ಬೆನ್ನಿಗೆ ಹಾಗೂ ಕುತ್ತಿಗೆ ಭಾಗಕ್ಕೆ ಥಳಿಸಿದರು. ಸಂಜೆ ನಾಲ್ಕು ಗಂಟೆಗೆ ಠಾಣೆಗೆ ಕರೆತಂದು, ಮಧ್ಯರಾತ್ರಿ 12 ಗಂಟೆಗೆ ಚಿಕಿತ್ಸೆಗೆ ದಾಖಲಿಸಿದರು ಎಂದು ರಾಝಿಕ್ ಮಾಹಿತಿ ನೀಡಿದರು.



Join Whatsapp