ಮಥುರಾ: ಯುಪಿ ಪೊಲೀಸರ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಮತ್ತು ದೇಶದ್ರೋಹ ಕಾಯ್ದೆಯಡಿ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ವಿರುದ್ಧದ ಅರ್ಜಿಯನ್ನು ಇತ್ತೀಚೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸಾಧನಾ ರಾಣಿ ಠಾಕೂರ್ ಅವರಿದ್ದ ಮಥುರಾ ನ್ಯಾಯಾಲಯ ಸ್ವೀಕರಿಸಿದೆ.
ಮೂವರು ಆರೋಪಿಗಳನ್ನು ಅವರ ವಕೀಲ ಮಧುಬನ್ ದತ್ ಚತುರ್ವೇದಿ ಪ್ರತಿನಿಧಿಸಿದ್ದರು. ಮುಂದಿನ ವಿಚಾರಣೆಯನ್ನು ನವೆಂಬರ್ 27ರಂದು ಘೋಷಿಸಲಾಗುವುದು.
ಟೈಮ್ಸ್ ಆಫ್ ಇಂಡಿಯಾದಲ್ಲಿ ನವೆಂಬರ್ 4ರಂದು ಪ್ರಕಟವಾದ ವರದಿಯ ಪ್ರಕಾರ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್(ಮಥುರಾ) ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗೆ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರೆಂದು ಹೇಳಲಾದ ನಾಲ್ವರನ್ನು ವಿಚಾರಣೆಗಾಗಿ 48 ಗಂಟೆಗಳ ಕಾಲ ಪೊಲೀಸ್ ರೀಮಾಂಡ್ ಗೆ ನೀಡಿತ್ತು. ಸಿಜೆಎಂನ ಈ ಆದೇಶವು ತನ್ನ ವ್ಯಾಪ್ತಿಗೆ ಮೀರಿದೆ ಎಂದು ಅವರ ವಕೀಲ ಚತುರ್ವೇದಿ ವಾದಿಸಿದರು.
ಹತ್ರಾಸ್ ಸಂತ್ರಸ್ತೆಯ ಭೇಟಿಗೆ ತೆರಳಿದ್ದ ವೇಳೆ ಮಾರ್ಗ ಮಧ್ಯೆ ತಡೆದು ಬಂಧಿಸಿದ್ದ ಮಥುರಾದ ಮಂತ್ ಠಾಣಾ ಪೊಲೀಸರು, ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು, ವದಂತಿಗಳನ್ನು ಹರಡಲು, ‘Am I not Inadia’s daughter’ ಎಂಬ ಕರಪತ್ರಗಳನ್ನು ಹಂಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಹಾಥರಸ್ ನಲ್ಲಿರುವ ತನ್ನ ವೆಬ್ ಸೈಟ್ ಕಾರ್ಡ್.ಕೋ ಮೂಲಕ ಭಾರತದ ವಿರುದ್ಧ ದ್ವೇಷ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.