ಉಡುಪಿ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ MGM ಕಾಲೇಜಿನಲ್ಲಿ ಕೇಸರಿ ಶಾಲು ವಿದ್ಯಾರ್ಥಿಗಳ ಜೊತೆ ಪತ್ತೆ!

Prasthutha|

►  ಕೇಸರಿ ಶಾಲು ಸಂಚಿನ ಹಿಂದೆ ಯಾರೆನ್ನುವುದಕ್ಕೆ ಸ್ಪಷ್ಟ ಉತ್ತರ ನೀಡಿದ ವೈರಲ್ ಚಿತ್ರ !

- Advertisement -

ಉಡುಪಿ : ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಹಿಜಾಬ್ ಕುರಿತಾಗಿನ ಚರ್ಚೆ ಮೊದಲು ಆರಂಭವಾಗಿದ್ದು ಉಡುಪಿ ಸರಕಾರಿ ಕಾಲೇಜಿನಲ್ಲಿ. ಅಲ್ಲಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷನಾಗಿರುವ ಯಶ್ಪಾಲ್ ಸುವರ್ಣ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಇಂದು ಪ್ರಾರಂಭಗೊಂಡ ಕೇಸರಿ ವಿವಾದದಲ್ಲಿ ಪಾಲ್ಗೊಂಡ ಅಲ್ಲಿನ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ..

ಎಲ್ಲಾ ಸರಕಾರಿ ಮತ್ತು ಅನುಮತಿ ಇರುವ ಖಾಸಗಿ ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಇದುವರೆಗೆ ಹಿಜಾಬ್ ಧರಿಸಿಕೊಂಡು ಹೋಗುತ್ತಿದ್ದರು. ಇದನ್ನು ತಡೆಯುವ ಸಂಚಿನ ಭಾಗವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬರಲು ಪ್ರಾರಂಭಿಸಿದ್ದರು. ಇದು ಸಹಜವಾಗಿ ಕಾಲೇಜಿನಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಎಲ್ಲಾ  ಷಡ್ಯಂತ್ರದ ಹಿಂದಿರುವವರು ಯಾರು ಎನ್ನುವ ಪ್ರಶ್ನೆಗೆ ಯಶ್ಪಾಲ್ ಸುವರ್ಣ ಉತ್ತರವಾಗಿದ್ದಾರೆ.

- Advertisement -

ಉಡುಪಿ ಕಾಲೇಜಿನಲ್ಲಿ ಹಿಜಾಬ್ ಚರ್ಚೆ ನಡೆಯುತ್ತಿದ್ದಾಗ ಆಡಳಿತ ಸಮಿತಿಯ ಉಪಾಧ್ಯಕ್ಷ ಸುವರ್ಣ ಮುಂಚೂಣಿಯಲ್ಲಿ ನಿಂತು ಹಿಜಾಬ್ ಗೆ ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಈ ಹಿಜಾಬ್ ಚರ್ಚೆ ನಿಲ್ಲಿಸಲು ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಐದು ನಿಮಿಷ ಸಾಕು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಅವರೇ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳ ಜೊತೆ ನಿಂತಿರುವ ಫೋಟೊ ವೈರಲ್ ಆಗಿದ್ದು, ಈ ಎಲ್ಲಾ ಸಂಚು ಮತ್ತು ಷಡ್ಯಂತರದ ಹಿಂದಿರುವ ರೂವಾರಿ ಸಂಘಪರಿವಾರದವರು ಎಂದು ಸ್ವತಃ ಉಡುಪಿಯ ಸಾರ್ವಜನಿಕರೇ ಆರೋಪಿಸುತ್ತಿದ್ದಾರೆ.

ಕಾಲೇಜು ಆವರಣದೊಳಗೆ ಹೊರಗಿನ ಸಂಘಟನೆಯ ಪದಾಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಪ್ರವೇಶಿಸಿದರೆ ವಾತಾವರಣ ಕಲುಷಿತಗೊಳ್ಳುತ್ತದೆ. ಆದ್ದರಿಂದ ಯಾವ ಸಂಘಟನೆಯವರನ್ನೂ ಕಾಲೇಜಿನೊಳಗೆ ಬರಲು ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 



Join Whatsapp